ಜಿಲ್ಲಾ ಸುದ್ದಿಬೆಳಗಾವಿ

ಕೇಂದ್ರ ಸರ್ಕಾರದ ವಿರುದ್ಧ ರೈತರ ಆಕ್ರೋಶ : ಪ್ರತಿಭಟನಾಕಾರರನ್ನು ಬಂಧಿಸಿ ಕರೆದೊಯ್ದ ಪೊಲೀಸರು

ಬೆಳಗಾವಿ : ರೈತ ವಿರೋಧಿ ಕಾನೂನಗಳನ್ನ ಕೇಂದ್ರ ಸರ್ಕಾರ ಕೈ ಬಿಡಬೇಕು ಹಾಗೂ ಖಾಸಗೀಕರಣವನ್ನು ಕೂಡಲೇ ನಿಲ್ಲಿಸಬೇಕು ಎಂದು ಘೋಷಣೆ ಕೂಗಾತ್ತಾ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ರೈತ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ನಗರದ ಹೃದಯ ಭಾಗವಾದ ಚೆನ್ನಮ್ಮಾ ವೃತ್ತದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದ್ದ ರೈತರು ಹಾಗೂ ಕಾರ್ಮಿಕ ಮುಖಂಡರು ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು.

ಪ್ರತಿಭಟನೆ ಕಾವು ಏರುತ್ತಿದ್ದಂತೆ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಎಪಿಎಂಸಿ ಪೊಲೀಸ್ ಠಾಣೆಗೆ ಕರೆದೊಯ್ದರು,ಪೊಲೀಸರು ಬಂಧಿಸುವ ವೇಳೆ ಕೂಡ ರೈತ ನಾಯಕರು ಪ್ರತಿಭಟಿಸುತ್ತ ಪೊಲೀಸ್ ವ್ಯಾನ್ ಹತ್ತಿದ್ದಾರೆ.

ಇನ್ನು ಬೆಳಗಾವಿ ಜಿಲ್ಲೆಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ಶುರುವಾದ ಭಾರತ್ ಬಂದ್ ಪ್ರತಿಭಟನೆ 11 ಗಂಟೆ ಎನ್ನುವಷ್ಟರಲ್ಲಿ ಸಂಪೂರ್ಣವಾಗಿ ಸ್ತಬ್ಧವಾಗಿದ್ದು ಎಂದಿನಂತೆ ಜನಜೀವನ ಮುಂದುವರೆದಿದೆ

Related Articles

Leave a Reply

Your email address will not be published. Required fields are marked *

Back to top button