ಜಿಲ್ಲಾ ಸುದ್ದಿಬೆಳಗಾವಿ
ನಾಗಾಲ್ಯಾಂಡ್ ನಲ್ಲಿ ಗಸ್ತು ತಿರುಗುವಾಗ ಬೆಳಗಾವಿ ಯೋಧ ಹುತಾತ್ಮ

ಬೆಳಗಾವಿ : ನಾಗಾಲ್ಯಾಂಡ್ ಗಡಿಯಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದ ಬೆಳಗಾವಿ ಜಿಲ್ಲೆಯ ಯೋಧನೊಬ್ಬ ಹುತಾತ್ಮರಾಗಿರುವ ಘಟನೆ ನಡೆದಿದೆ. ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಶಿವಾಪುರ ಕೊಣ್ಣೂರ ಗ್ರಾಮದ ಮಂಜುನಾಥ ಅಪ್ಪಣ್ಣ ಗೌಡಣ್ಣವರ (38) ಎಂಬುವರು ನಾಗಾಲ್ಯಾಂಡ್ ಗಡಿಯಲ್ಲಿ ಗಸ್ತು ತಿರುಗುವಾಗ ಅವರ ವಾಹನ ಅಪಘಾತಕ್ಕೀಡಾಗಿ ಮಂಜುನಾಥ ಹುತಾತ್ಮರಾಗಿದ್ದಾರೆ.
18 ವರ್ಷಗಳಿಂದ ಮದ್ರಾಸ ಎಂಜಿನಿಯರಿಂಗ್ ಗ್ರೂಪದಲ್ಲಿ ನೇಮಕಗೊಂಡು ನಾಗಲ್ಯಾಂಡ್ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಇವರು ಚಾಲಕನಿದ್ದು ತಮ್ಮ ಕರ್ತವ್ಯಕ್ಕೆ ಹೋಗುವಾಗ ಅರಣ್ಯದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಪಾರ್ಥಿವ ಶರೀರ ನಾಳೆ ಅಂದರೆ ಜುಲೈ 12 ರಂದು ಸಾಯಂಕಾಲ, 6 ಘಂಟೆಯ ಸುಮಾರಿಗೆ ಗೋವಾ ಮಾರ್ಗವಾಗಿ ಸ್ವಗ್ರಾಮಕ್ಕೆ ಬರಲಿದೆ. ಪಾರ್ಥೀವ ಶರೀರವನ್ನು ಗೋವಾದಿಂದ ಗೋಕಾಕ್ ತಾಲೂಕಿನ ಕೊನ್ನೂರ ಶಿವಾಪೂರ ಗ್ರಾಮಕ್ಕೆ ಕೊಂಡುಯ್ಯುವಾಗ ಬೆಳಗಾವಿಯಲ್ಲೂ ಯೋಧನ ಅಂತಿಮ ದರ್ಶನದ ವ್ಯೆವಸ್ಥೆ ಮಾಡುವ ಸಾಧ್ಯತೆ ಇದೆ.




