ಬೆಳಗಾವಿ

ಬಿಮ್ಸ್ ಅಭಿವೃದ್ಧಿಗಾಗಿ ಉದ್ಯಮಿಗಳಿಂದ 22.26 ಲಕ್ಷ ರೂ. ಕೊಡುಗೆ

ಬೆಳಗಾವಿ: ಪ್ರಾದೇಶಿಕ ಆಯುಕ್ತರು ಹಾಗೂ ಬೆಳಗಾವಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ(ಬಿಮ್ಸ್) ಆಡಳಿತಾತ್ಮಕ ವ್ಯವಸ್ಥೆಯ ಮೇಲುಸ್ತುವಾರಿ ಅಧಿಕಾರಿಗಳಾದ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರ ಮನವಿಯ ಮೇರೆಗೆ ಜಿಲ್ಲೆಯ ವಿವಿಧ ಉದ್ಯಮಿಗಳು ಬಿಮ್ಸ್ ಅಭಿವೃದ್ಧಿಗೆ ಉದಾರ ನೆರವು ನೀಡಿದ್ದಾರೆ.ಬಿಮ್ಸ್ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ಕಾಗಿ ವಿವಿಧ ಉದ್ಯಮಿಗಳು ಒಟ್ಟಾರೆ ರೂ .22.26 ಲಕ್ಷ ಕೊಡುಗೆಯನ್ನು ನೀಡಿದರು.

ಬಿಮ್ಸ್ ನಲ್ಲಿ ಬುಧವಾರ ಬೆಳಗಾವಿಯ ಜಿನಾಬಾಕುಲ್ ಫೋರ್ಜ ಪ್ರೈ, ಲಿಮಿಟೆಡ್, ರೂ. 456000, ಜೆ.ಪಿ.ಎಫ್ ಮೆಟಾಕ್ಯಾಸ್ಟ್ ಪ್ರೈ, ಲಿ ರೂ. 125000 ಯಂಕಾಯ್ಸ್ ಎಂಜಿನಿಯರಿಂಗ್ ಪ್ರೈ.ಲಿ 1,20,000, ಏಕಸ್ 10,00,000 ನೆತಾಲ್ಕರ್ ಪವರ್ ಟ್ರಾನ್ಸ್ ಮಿಷನ್ 5,00,000, ಡೈಮೆಂಡ್ ಮೆಟಲ್ ಸ್ಕ್ರೀನ್ಸ್ ಪ್ರೈ.ಲಿ ರೂ- 25,000 ಒಟ್ಟು ರೂ. 22,26,000 ಸ್ವೀಕರಿಸಲಾಯಿತು.

ಕೊಡುಗೆ ಸ್ವೀಕರಿಸಿದ ಮಾತನಾಡಿದ ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರು, ಬಿಮ್ಸ್ ಅಭಿವೃದ್ಧಿಗೆ ಉದ್ಯಮಿಗಳು ಕಳಕಳಿಯಿಂದ ಕೊಡುಗೆ ನೀಡಿರುವುದು ಪ್ರಶಂಶನೀಯ. ಈ ಹಣವನ್ನು ಬಿಮ್ಸ್ ಅಭಿವೃದ್ಧಿಗೆ ಸಮರ್ಪಕವಾಗಿ ಬಳಸಲಾಗುವುದು ಎಂದು ಹೇಳಿದರು.

ಬಿಮ್ಸ್ ಸಂಸ್ಥೆಯ ಪ್ರಭಾರ ನಿರ್ದೆಶಕರಾದ ಡಾ. ಉಮೇಶ ಕೆ. ಕುಲಕರ್ಣಿ ಹಾಗೂ ಮುಖ್ಯ ಆಡಳಿತಾಧಿಕಾರಿಗಳು ಎಸ್.ಎಸ್, ಬಳ್ಳಾರಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡ ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button