ಜಿಲ್ಲಾ ಸುದ್ದಿದಾವಣಗೆರೆ
ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುದ ಬಳಿಕ ಮುಂದಿನ ನಡೆ: ಬಸವರಾಜ್ ಹೊರಟ್ಟಿ

ಧಾರವಾಡ: ಬಿಜೆಪಿ ಪಕ್ಷ ಸೇರುವುದು ಈವರೆಗೂ ಯಾವುದೇ ಅಧಿಕೃತವಾಗಿಲ್ಲ. ಕೇಂದ್ರ ಗೃಹಮಂತ್ರಿ ಭೇಟಿ ಆದಾಗ ಮಾತುಕತೆಗಳು ಸಹಜ. ಮೇ ೧೧ರಂದು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೆನೆ. ರಾಜೀನಾಮೆ ನೀಡಿದ ಬಳಿಕ ಮುಂದಿನ ನಡೆ ತಿಳಿಸುತ್ತೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೇ ೧೧ಕ್ಕೆ ಸಂಜೆ ಸಭಾಪತಿ ಸ್ಥಾನಕ್ಕೆ ಹಾಗೂ ಸದಸ್ಯತ್ವಕ್ಕೆ ರಾಜೀನಾಮೆ ನೀಡುವೆ. ಅಲ್ಲಿಯವರೆಗ ಯಾವುದೇ ರಾಜಕೀಯ ಮಾತನಾಡಲ್ಲ ಎಂದರು.
ಸಭಾಪತಿ ಆಗಿರುವ ಹಿನ್ನಲೆ ಬೇರೆ ಪಕ್ಷದ ಬಗ್ಗೆ ಮಾತನಾಡಲು ಬರಲ್ಲ. ಷಾ ಅವರು ನನ್ನ ಬಗ್ಗೆ ಕೇಳಿದ್ದರು. ರಾಜಕಿಯದಲ್ಲಿ ಒಳ್ಳೆಯ ಹೆಸರು ಹೊಂದಿದ್ದಾಗಿ ಶ್ಲಾಘಿಸಿದ್ದು, ಅವರ ಭೇಟಿ ಖುಷಿ ತಂದಿದೆ ಎಂದರು.
ಪಶ್ಚಿಮ ವಿಧಾನ ಪರಿಷತ್ ಟಿಕೆಟ್ ನೀಡುವ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ. ಟಿಕೆಟ್ ಸಿಗದ ಬಗ್ಗೆ ಪಕ್ಷಕ್ಕೆ ಸೇರಿದ ಮೇಲೆ ವಿಚಾರ ಮಾಡುವೆ. ರಾಜಿನಾಮೆ ನೀಡಿ ಮುಂದಿನ ನಡೆ ಹೇಳಲಿದ್ದೇನೆ ಎಂದು ಹೇಳಿದರು.




