ಒಕ್ಕೂಟ ವ್ಯವಸ್ಥೆಯ ವೈವಿಧ್ಯತೆ, ಪ್ರಾದೇಶಿಕತೆ ಉಳಿಸಲು ಕೇಂದ್ರಕ್ಕೆ ಅಂಬಾಮಣಿ ಮೂರ್ತಿ ಆಗ್ರಹ

ಬೆಂಗಳೂರು: ಕರ್ನಾಟಕ ವಿಶ್ವಕರ್ಮ ಸಾಹಿತ್ಯ, ಕಲಾ ಅಕಾಡೆಮಿ, ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬೆಂಗಳೂರಿನಲ್ಲಿ ಭಾನುವಾರ ಕರ್ನಾಟಕ ರಾಜ್ಯೋತ್ಸವ ಹಾಗೂ ಸಾಂಸ್ಕೃತಿಕ ಸಮಾರಂಭವನ್ನು ಆಯೋಜಿಸಿತ್ತು.
ಕಾರ್ಯಕ್ರಮವನ್ನು ಉದ್ಥಾಟಿಸಿದ ಹೆಸರಾಂತ ಮನೋರೋಗ ತಜ್ಞ ಡಾ.ಸಿ.ಆರ್.ಚಂದ್ರಶೇಖರ್ ಅವರು, ಮನಸ್ಸನ್ನು ಸಮಾಧಾನವಾಗಿಟ್ಟುಕೊಂಡರೆ ಶೇ.70 ರಷ್ಟು ರೋಗಗಳು ಬರದ ಹಾಗೆ ತಡೆದುಕೊಳ್ಳಬಹುದು ಎಂದು ಹೇಳಿದರು.
ಮುಖ್ಯಅತಿಥಿಯಾಗಿದ್ದ ಉದ್ಯಮಿ ಹಾಗೂ ಲೇಖಕ ವಿಜಯ್ ಕುಮಾರ್ ಕಮ್ಮಾರ್ ಅವರು, ಪ್ರತಿಯೊಬ್ಬ ಕನ್ನಡಿಗರು ನಮ್ಮ ಮನೆ ಮತ್ತು ಹೃದಯದಲ್ಲಿ ಕನ್ನಡವನ್ನು ಪ್ರತಿಷ್ಠಾಪಿಸುವ ಮೂಲಕ ಕನ್ನಡ ಉಳಿಸಬೇಕು ಎಂದರು.
ಪ್ರಾಧ್ಯಾಪಕಿ ಡಾ.ಎಸ್.ಶೀಲಾದೇವಿ ಮಳೀಮಠ ಅವರು ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಎಸ್.ವಿ.ಅಂಬಾಮಣಿ ಮೂರ್ತಿ ಅವರು, ದೇಶದ ಒಕ್ಕೂಟ ವ್ಯವಸ್ಥೆಯ ವೈವಿಧ್ಯತೆ ಮತ್ತು ಪ್ರಾದೇಶಿಕತೆ ಉಳಿಸಬೇಕು. ಆದರೆ ಕೇಂದ್ರ ಸರ್ಕಾರ ಈಗ ಕೈಗೊಳ್ಳುತ್ತಿರುವ ಕ್ರಮಗಳು ಮತ್ತು ಕಾರ್ಯಸೂಚಿಗಳು ಇದಕ್ಕೆ ವಿರುದ್ಧವಾಗಿವೆ ಅಭಿಪ್ರಾಯಪಟ್ಟರು.
ಇದೇ ವೇಳೆ ಡಾ.ಸಿ.ಆರ್.ಚಂದ್ರಶೇಖರ್ ಅವರು ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ಕುರಿತು ಬರೆದಿರುವ ಕೃತಿಯ ಎರಡನೆ ಮುದ್ರಣವನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಡಾ.ಸಿ.ಆರ್.ಚಂದ್ರಶೇಖರ್ ಸೇರಿದಂತೆ ಅತಿಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.




