ಬಾಗಲಕೋಟೆ

ಕೊರೊನಾ ಹಿನ್ನೆಲೆ: ಶಾಲಾ ರಜಾ ಅವಧಿಯಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಸಿದ ವಿದ್ಯಾರ್ಥಿ

ಬಾಗಲಕೋಟೆ: ಕೊರೊನಾ ಹಿನ್ನೆಲೆಯಲ್ಲಿ ಶಾಲೆಗಳು ಬಂದ್ ಆಗಿದ್ದವು. ಆನ್ಲೈನ್ ತರಗತಿ ನಡೆದರೆ.ಇನ್ನೂ ಕೆಲ ವಿದ್ಯಾರ್ಥಿಗಳು ವಿಭಿನ್ನ ಹವ್ಯಾಸಗಳಲ್ಲಿ ತೊಡಗಿ ಸಮಯ ಸದುಪಯೋಗ ಪಡಿಸಿಕೊಂಡಿದ್ದಾರೆ. ಇಲ್ಲೊಬ್ಬ ವಿದ್ಯಾರ್ಥಿ ಕೊರೊನಾ ರಜಾ ಅವಧಿಯಲ್ಲಿ ಮಣ್ಣಿನಲ್ಲಿ ಗಣೇಶ್ ಮೂರ್ತಿ ರಚಿಸಿ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ನಂದಿಕೇಶ್ವರ ಗ್ರಾಮದ ಮಹಾಕೂಟೇಶ್ವರ ಹಿರಿಯ ಪ್ರಾಥಮಿಕ ಶಾಲೆಯ 7ತರಗತಿ ವಿದ್ಯಾರ್ಥಿ ಅಜಯ್ ಮೊನೇಶ್ ಪತ್ತಾರ ಎಂಬಾತ ಗಣೇಶ ಮೂರ್ತಿ ತಯಾರಿಸಿದ್ದಾನೆ. ಇದೀಗ ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಅಜಯ್ ಕೊರೊನಾ ರಜಾ ಅವಧಿಯಲ್ಲಿ ಗಣೇಶ್ ಮೂರ್ತಿ ತಯಾರಿಸುವಲ್ಲಿ ಸಮಯ ಕಳೆದಿದ್ದಾನೆ. ಅಂದವಾಗಿ ಮಣ್ಣಿನಲ್ಲಿ ಗಣೇಶ ಮೂರ್ತಿ ತಯಾರಿಸಿದ್ದು ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾನೆ.

ಅಜಯ್ ವಿದ್ಯಾರ್ಥಿ ಶಾಲೆಯಲ್ಲಿ ಪಠ್ಯ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಹೆಚ್ಚು ಕ್ರಿಯಾಶೀಲ ವಿದ್ಯಾರ್ಥಿ. ಚಿತ್ರಗಳನ್ನು ಬಿಡಿಸುವದು, ಚಿತ್ರಗಳಿಗೆ ಬಣ್ಣತುಂಬುವುದು, ಮಣ್ಣಿನಿಂದ ಮಾಡಿದ ಕ್ಲೈ ಮಾಡಲ್ ಮಾಡುವುದು ಈತನ ಹವ್ಯಾಸವಾಗಿದೆ. ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗೆ ಭಾರೀ ಬೇಡಿಕೆಯಿದೆ. ವಿದ್ಯಾರ್ಥಿ ಅಜಯ್ ಸ್ಥಳೀಯವಾಗಿ ಸಿಗುವ ವಸ್ತುಗಳನ್ನು ಬಳಸಿಕೊಂಡು ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಸಿದ್ದಾನೆ. ಶಿಕ್ಷಕರಾದ ಎಸ್ ಬಿ ಪವಾಡಶೆಟ್ಟಿ,ಶ್ರೀಮತಿ Y G ನಾಯಕ್,ಶಾಲಾ ಆಡಳಿತ ಮಂಡಳಿ ಹಾಗೂ ಮುಖ್ಯಗುರುಗಳು ಹಿತೈಷಿಗಳು ಶ್ರೀ ಬಸವರಾಜ್ ಭೂತಾಳಿ ಸೇರಿದಂತೆ ಗ್ರಾಮಸ್ಥರು ಅಭಿನಂದಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button