Breaking Newsಬಾಗಲಕೋಟೆರಾಜಕೀಯ
ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ; ಸಚಿವ ಉಮೇಶ್ ಕತ್ತಿ

ಬಾಗಲಕೋಟೆ: ನಾನು ಸಿಎಂ ಹುದ್ದೆ ಆಕಾಂಕ್ಷಿಯೆಂಬುದು ನಿಜ. ನಾನು 9 ಬಾರಿ ಶಾಸಕನಾಗುದ್ದೇನೆ ಎಂದು ಸಚಿವ ಉಮೇಶ್ ಕತ್ತಿ ಬಾಗಲಕೋಟೆಯಲ್ಲಿ ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ನನಗಿನ್ನೂ ವಯಸ್ಸಿದೆ. ಇನ್ನು ಹದಿನೈದು ವರ್ಷದಲ್ಲಿ ಮುಖ್ಯಮಂತ್ರಿ ಆಗಬಹುದು. ಅದಕ್ಕೆ ನಸೀಬು ಬೇಕು ಎಂದರು.
ಈ ಬಾರಿಯ ಅವಕಾಶ ಸಿಕ್ರೆ ಏನ್ಮಾಡ್ತೀರಾ ಎಂಬ ಪ್ರಶ್ನೆಗೆ ಕತ್ತಿ ಬೈ ಲಕ್ಕ್ ಇದೇ ಬಾರಿ ಅವಕಾಶ ಸಿಕ್ರೆ, ಒಳ್ಳೆಯ ರೀತಿಯಿಂದ ನಿಭಾಯಿಸ್ತೇನೆ, ರಾಜ್ಯಕ್ಕೆ ಒಳ್ಳೆಯ ಸರ್ಕಾರ ಕೊಟ್ಟು ತೋರಿಸ್ತೇನೆ ಎಂದರು.
