ಬಾಗಲಕೋಟೆ

ಬಾದಾಮಿ: ಆಹಾರ ಕಿಟ್​ಗಾಗಿ ಮುಗಿಬಿದ್ದ ಕಾರ್ಮಿಕರು

ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರ ಬಾದಾಮಿಯಲ್ಲಿ ಕಾರ್ಮಿಕರು ಕಿಟ್ ಪಡೆಯಲು ಬರೋಬ್ಬರಿ ಅರ್ಧ ಕಿಲೋ ಮೀಟರ್ ಸಾಲುಗಟ್ಟಿ ನಿಂತು,ಕಿಟ್ ಗಾಗಿ ಮುಗಿಬಿದ್ದು ಕೋವಿಡ್ ನಿಯಮ ಗಾಳಿಗೆ ತೂರಿರುವ ಘಟನೆ ನಡೆದಿದೆ.

ಬಾದಾಮಿ ಪಟ್ಟಣದ ರಾಮದುರ್ಗ ರಸ್ತೆಯಲ್ಲಿರುವ ತಾಲೂಕು ಸಮಾಜ ಕಲ್ಯಾಣ ಇಲಾಖೆ ಕಚೇರಿಯಿಂದ ಮುಖ್ಯ ರಸ್ತೆಯವರೆಗೆ ಬೆಳಿಗ್ಗೆಯಿಂದಲೇ ಕಾರ್ಮಿಕರು, ಮಹಿಳೆಯರು ಸಾಲುಗಟ್ಟಿ ನಿಂತಿದ್ದರು.ಇನ್ನು ಬಾದಾಮಿ ತಾಲೂಕಿನ ವಿವಿಧ ಹಳ್ಳಿಗಳಿಂದ ಕಾರ್ಮಿಕರು , ಮಹಿಳೆಯರು ಟಂಟಂ ಬಾಡಿಗೆ ಮಾಡಿಕೊಂಡು ಕಿಟ್ ಪಡೆಯಲು ಹರಸಾಹಸಪಟ್ಟರು. ಕಚೇರಿ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ಕಿಟ್ ಪಡೆಯಲು ಮುಗಿಬಿದ್ದಿದ್ದಾರೆ.ಕಿಟ್ ಸಿಗುತ್ತೋ ಇಲ್ವೋ ಎಂದು ಕಾರ್ಮಿಕರು ನೂಕುನುಗ್ಗಲು ನಡೆಸಿದ್ದು. ಬಾಬು ಜಗಜೀವನರಾಮ್ ಸಮುದಾಯ ಭವನದೊಳಗೆ ನೂಕುನುಗ್ಗಲು ಉಂಟಾಯಿತು.

ಕಳೆದ ತಿಂಗಳು ಸಾಂಕೇತಿಕವಾಗಿ ಕಾರ್ಮಿಕರಿಗೆ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಕಿಟ್ ವಿತರಣೆ ಮಾಡಿದ್ದರು. ಆ ಬಳಿಕ ಮಾರನೇ ದಿನ ಕಟ್ಟಡ ಕಾರ್ಮಿಕರು ಕಿಟ್ ಪಡೆಯಲು ತಹಶೀಲ್ದಾರ್ ಕಚೇರಿಯಲ್ಲಿ ಜಮಾಯಿಸಿದ್ದು.ಸಾಲುಗಟ್ಟಿ ನಿಂತಿದ್ದರೂ, ವಿತರಣೆ ಕೊಠಡಿಯಲ್ಲಿ ಮುಗಿಬಿದ್ದ,ವಾಗ್ವಾದ ನಡೆಸಿ ಆಹಾರಕಿಟ್ ಪಡೆಯಲು ಹರಸಾಹಸ ನಡೆಸಿದ್ದರು..ಆಗ ತಹಶೀಲ್ದಾರ್ಎಸ್ ತಾಲೂಕಿನಲ್ಲಿ ಎಸ್ ಎಸ್ ಇಂಗಳೆ ಕಾರ್ಮಿಕರಿಗೆ ಕಿಟ್ ವಿತರಣೆ ಸ್ಥಗಿತಗೊಳಿಸಿ, ಸಮಾಜ ಕಲ್ಯಾಣ ಇಲಾಖೆಗೆ ಕಿಟ್ ವಿತರಣೆಗೆ ಸೂಚಿಸಿದ್ದರು. ಇವತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕಿಟ್ ವಿತರಣೆಗೆ ದಿನ ನಿಗದಿಗೊಳಿಸಿ, ತಾಲೂಕು ಕಚೇರಿಗೆ ಬರಲು ಸೂಚಿಸಿದ್ದಾರೆ.ಹಳ್ಳಿ,ಪಟ್ಟಣಗಳಿಂದ ಬೆಳಿಗ್ಗೆಯಿಂದಲೇ ಕಿಟ್ ಗಾಗಿ ಸಾಲು ನಿಂತಿದ್ದರು‌.ತಾಲೂಕಿನಲ್ಲಿ 20165ಜನ ಕಟ್ಟಡ ಕಾರ್ಮಿಕರು ಆಹಾರ ಕಿಟ್ ಪಡೆಯುವ ಅರ್ಹ ಫಲಾನುಭವಿಗಳು ಆಯ್ಕೆಯಾಗಿದ್ದಾರೆ. ಸರ್ಕಾರ ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರು ಸಂಕಷ್ಟ ಅನುಭವಿಸಿದ್ದಾರೆ ಎಂದು ಆಹಾರ ಕಿಟ್ ವಿತರಣೆಗೆ ಕ್ರಮ ಕೈಗೊಂಡಿದೆ.ಕಟ್ಟಡ ಕಾರ್ಮಿಕರು ಮಾತ್ರ ಕಿಟ್ ಗಾಗಿ ಕೋವಿಡ್ ನಿಯಮ ಉಲ್ಲಂಘಿಸಿ, ನೂಕುನುಗ್ಗಲು ಉಂಟು ಮಾಡಿದ್ದಾರೆ. ಗ್ರಾಮವಾರು ಕಿಟ್ ವಿತರಣೆಗೆ ಕ್ರಮ ಕೈಗೊಂಡಿದ್ದರೇ ಇಷ್ಟೋಂದು ಗದ್ದಲ ಆಗುತ್ತಿರಲಿಲ್ಲ.ಜನರು ಕಿಟ್ ಸಿಗುತ್ತೋ ಇಲ್ವೋ ಎಂದು ಮುಗಿಬಿದ್ದಿದ್ದಾರೆ ಎನ್ನುತ್ತಾರೆ ಫಲಾನುಭವಿ ತಿಪ್ಪಣ್ಣ ದಡ್ಡಿ.

ಇನ್ನು ಕಿಟ್ ನಲ್ಲಿ ಐದು ಕೆಜಿ ಅಕ್ಕಿ,ಎಣ್ಣೆ,ಬೇಳೆ ಪ್ಯಾಕೇಟ್ ಇದ್ದು, ಕಿಟ್ ಪಡೆಯಲು ನೂಕಾಟ ತಳ್ಳಾಟ ಆಯ್ತು , ಹಳ್ಳಿಯೊಳಗೆ ಹಂಚಿದ್ದರೆ ಚಲೋ ಇರುತ್ತಿತ್ತು ಎಂದು ಮಹಿಳೆಯರು ಮಾತನಾಡಿಕೊಳ್ಳುತ್ತಾ ತಲೆ ಮೇಲೆ ಕಿಟ್ ಹೊತ್ತು ಸಾಗಿದರು. ಇನ್ನು ಕಿಟ್ ವಿತರಣೆಯ ಸಾಲುಗಟ್ಟಿ ನಿಂತು ಕೋವಿಡ್ ನಿಯಮ ಉಲ್ಲಂಘಿಸುತ್ತಿದ್ದಾರೆ.ಮಾಸ್ಕ್ ಹಾಕಿಕೊಳ್ಳದಿರುವರೇ ಹೆಚ್ಚಿನವರಿದ್ದರೇ ಸಾಮಾಜಿಕ ಅಂತರವೇ ಇರಲಿಲ್ಲ. ಮೂರನೇ ಅಲೆ ಭೀತಿಯಿದೆ.ಈ ಮಧ್ಯೆ ಆಹಾರ ಕಿಟ್ ಗಾಗಿ ಕೋವಿಡ್ ನಿಯಮ ಗಾಳಿಗೆ ತೂರಿದ್ದು ವಿಪರ್ಯಾಸವೇ ಸರಿ.

Spread the love

Related Articles

Leave a Reply

Your email address will not be published. Required fields are marked *

Back to top button