ಅಫ್ಘಾನಿಸ್ತಾನದಿಂದ ಬಾಗಲಕೋಟೆ ಮೂಲದ ರಾಯಭಾರಿ ಕಚೇರಿ ಕಮಾಂಡೋ ಸ್ವದೇಶಕ್ಕೆ ಆಗಮನ

ಬಾಗಲಕೋಟೆ: ತಾಲಿಬಾನಿಗಳ ಅಟ್ಟಹಾಸದಿಂದ ಅಪಘಾನಿಸ್ತಾನದಲ್ಲಿ ಸಿಲುಕಿದ್ದ ಬಾಗಲಕೋಟೆ ಮೂಲದ ಕಮಾಂಡೋ ಸುರಕ್ಷಿತವಾಗಿ ದೆಹಲಿಗೆ ಮರಳಿದ್ದಾರೆ.
ಅಪಘಾನಿಸ್ತಾನದ ಭಾರತೀಯ ರಾಯಭಾರ ಕಚೇರಿಯಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ ಐಟಿಬಿಪಿ ಕಮಾಂಡೋ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಕಸಬಾ ಜಂಬಗಿ ನಿವಾಸಿ ಮಂಜುನಾಥ ದೊಡ್ಡಪ್ಪ ಮಾಳಿ ಸುರಕ್ಷಿತವಾಗಿ ದೆಹಲಿ ತಲುಪಿರುವ ಕಮಾಂಡೋ.
ಮಂಜುನಾಥ್ 2019ರಿಂದ ಕಾಬುಲ್’ನ ಭಾರತೀಯ ರಾಯಭಾರ ಕಚೇರಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸ್ತಾ ಇದ್ದರು. ಆದ್ರೆ ಅಫಘಾನಿಸ್ಥಾನದಲ್ಲಿ ತಾಲಿಬಾನಿಗಳ ಉಪಟಳ ತಾರಕಕ್ಕೇರುತ್ತಿದ್ದಂತೆ ಮಂಜುನಾಥ್ ಆಗಸ್ಟ್ 15ರಂದು ಭಾರತಿಯ ರಾಯಭಾರ ಕಚೇರಿಯಿಂದ ಕಾಬೂಲ್ ಏರ್ ಪೋರ್ಟಗೆ ಬರಲು ನಾಲ್ಕು ಬಾರಿ ಪ್ರಯತ್ನಿಸಿದ್ದರೂ ಉಗ್ರರ ಅಟ್ಟಹಾಸದಿಂದ ಅದು ಸಾಧ್ಯವಾಗಿರಲಿಲ್ಲ. ದಾರಿ ಮದ್ಯೆ ಉಗ್ರರ ದಾಳಿ, ಅವರ ಜೊತೆ ಮುಖಾಮುಖಿ ಎಲ್ಲವನ್ನೂ ಅನುಭವಿಸಿ ಕೊನೆಗೆ ಐದನೇಯ ಪ್ರಯತ್ನದಲ್ಲಿ ಕಾಬುಲ್ ಏರ್ ಪೋರ್ಟ್ ತಲುಪಿದ್ದಾರೆ. ಅಲ್ಲಿಂದ ರಾಯಭಾರಿ ಕಚೇರಿಯ ಅಧಿಕಾರಿಗಳ ಜೊತೆ ಭಾರತೀಯ ಸೇನಾ ವಿಮಾನದ ಮೂಲಕ ಗುಜರಾತ್ ಮಾರ್ಗವಾಗಿ ದೆಹಲಿಗೆ ಬಂದು ತಲುಪಿದ್ದಾರೆ.

ಸದ್ಯ ಮಂಜುನಾಥ ಅವರು ಕ್ವಾರಂಟೈನ್ ಆಗಿದ್ದು, ಕ್ವಾರಂಟೈನ್ ಮುಗಿಯುವ ವರೆಗೂ ಮನೆಗೆ ಬರಲು ಸಾಧ್ಯವಿಲ್ಲ. ಆದ್ರೆ ಇತ್ತ ಮುಧೋಳ ತಾಲೂಕಿನ ಕಸಬಾಜಂಬಗಿ ಗ್ರಾಮದ ಕಮಾಂಡೋ ತಂದೆ, ತಾಯಿ, ಪತ್ನಿ ಹಾಗೂ ಕುಟುಂಬಸ್ಥರು ಅವರು ಮನೆಗೆ ಆಗಮಿಸಲಿ ಎಂದು ಆತಂಕದಿಂದ ಕಾಯ್ದು ಕುಳಿತಿದ್ದಾರೆ.
ಗದಗ ಜಿಲ್ಲೆಯ ಬಳಗಾನೂರು ಮೂಲದ ರವಿ ನೀಲಗಾರ, ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಕೆರೂರು ಮೂಲದ ದಸ್ತಗೀರ್ ಮುಲ್ಲಾ. ಕರ್ನಾಟಕದ ಈ ಮೂರು ಜನ ಕಮಾಂಡೊ ಆಗಿ ಸೇವೆ ಸಲ್ಲಿಸುತ್ತಿದ್ದರು. ಸದ್ಯ ಮೂವರು ದೆಹಲಿಯಲ್ಲಿ ಕ್ವಾರಂಟೈನ್ ಆಗಿದ್ದಾರೆ..




