ಬಾಗಲಕೋಟೆ

ಬಾಗಲಕೋಟೆ: ಕೇಂದ್ರ ಅತಿವೃಷ್ಟಿ ಅಧ್ಯಯನ ತಂಡ ಸಭೆ

ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಗೆ ಆಗಮಿಸಿರುವ ಕೇಂದ್ರ ಸರ್ಕಾರದ ಅತಿವೃಷ್ಟಿ ಅಧ್ಯಯನ ತಂಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಭೆ ನಡೆಸಿತು.

ಸಭೆ ಬಳಿಕ ಜಮಖಂಡಿ ಉಪವಿಭಾಗ ವ್ಯಾಪ್ತಿಯಲ್ಲಿ ಹಾನಿ ಪರಿಶೀಲಿಸಿ ಅಧ್ಯಯನ ನಡೆಸಲಿದ್ದು, ಕೇಂದ್ರ ಜಲಶಕ್ತಿ ಮಂತ್ರಾಲಯದ ಅಧೀಕ್ಷಕ ಇಂಜಿನೀಯರ್ ಗುರುಪ್ರಸಾದ, ಕೇಂದ್ರ ಹಣಕಾಸು ಮಂತ್ರಾಲಯದ ಉಪಕಾರ್ಯದರ್ಶಿ ಮಹೇಶಕುಮಾರ ಅವರನ್ನೊಳಗೊಂಡ ಅಂತರ ಸಚಿವಾಲಯ ಅಧ್ಯಯನ ತಂಡವು ಆಲಮಟ್ಟಿಯಿಂದ ಬಾಗಲಕೋಟೆಗೆ ಆಗಮಿಸಿ, ಜಿಲ್ಲಾ ಪಂಚಾಯತ್ ನೂತನ ಸಭಾಭವನದಲ್ಲಿ ಜಿಲ್ಲೆಯಲ್ಲಿ ಅತಿವೃಷ್ಟಿ, ಪ್ರವಾಹದಿಂದಾದ ಹಾನಿಯ ಕುರಿತು ವಿವಿಧ ಇಲಾಖೆಯಿಂದ ಮಾಹಿತಿ ಪಡೆದುಕೊಂಡರು.

ಮುಧೋಳ ತಾಲೂಕಿನ ಚಿಚಖಂಡಿಗೆ ಭೇಟಿ ನೀಡಿ ಚಿಚಖಂಡಿ ಸೇತುವೆ, ಕಬ್ಬುಬೆಳೆ, ವಿದ್ಯುತ್ ಮೂಲಸೌಕರ್ಯಗಳ ಹಾನಿ ವೀಕ್ಷಿಸಲಿದ್ದಾರೆ. ಸೊರಗಾವಿ ಗ್ರಾಮದ ಮನೆ ಹಾನಿ, ಯಾದವಾಡ ಸೇತುವೆ, ರಸ್ತೆ, ಸೂರ್ಯಕ್ರಾಂತಿ ಬೆಳೆ ಹಾನಿ, ಹೆಸ್ಕಾಂ ಮೂಲಸೌಕರ್ಯಗಳ ಹಾನಿ ಪರಿಶೀಲಿಸಲಿದ್ದಾರೆ. ಮಿರ್ಜಿಯಲ್ಲಿ ಬಟ್ಟೆ, ಪಾತ್ರೆ ಮನೆಯ ಹಿಡುವಳಿ ವಸ್ತುಗಳ ನಷ್ಟ, ಗ್ರಾಮೀಣ ಕುಡಿಯುವ ನೀರಿನ, ಹೆಸ್ಕಾಂ ಮೂಲಸೌಕರ್ಯ ಹಾನಿ ವೀಕ್ಷಿಸುವರು. ರಬಕವಿ-ಬನಹಟ್ಟಿ ತಾಲೂಕಿನ ಡವಳೇಶ್ವರದಲ್ಲಿ ಕುಡಿಯುವ ನೀರಿನ, ಹೆಸ್ಕಾಂ ಮೂಲಸೌಕರ್ಯ ಹಾನಿ, ಮಧ್ಯಾಹ್ನ 3ಕ್ಕೆ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಬ್ಯಾರೇಜ್, ಲೋಕೋಪಯೋಗಿ, ಹೆಸ್ಕಾಂ ಮೂಲಸೌಕರ್ಯ ಹಾಗೂ ಬೆಳೆ ಹಾನಿ ವೀಕ್ಷಣೆ ಮಾಡಿ ತೆರಳಲಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button