ಬಾಗಲಕೋಟೆ

ಬಾಗಲಕೋಟೆಯ ಅಂಧ ವಿದ್ಯಾರ್ಥಿನಿ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ; ಜ್ಯೋತಿ ಸಾಧನೆಗೆ ಮೆಚ್ಚುಗೆ

ಬಾಗಲಕೋಟೆ:ಎಸ್ಸೆಸ್ಸೆಲ್ಸಿಯ ಅಂಧ ವಿದ್ಯಾರ್ಥಿಗಳ ವಿಭಾಗದಲ್ಲಿ ಬಾಗಲಕೋಟೆ ವಿದ್ಯಾರ್ಥಿನಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆಯೋ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದು, ವಿದ್ಯಾರ್ಥಿನಿ ಜ್ಯೋತಿ ಕಟಗೋಳ ಸಾಧನೆಗೆ ಅಭಿನಂದನೆ ಮಹಾಪೂರ ಹರಿದು ಬರುತ್ತಿದೆ.

ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಉತ್ತೂರು ಗ್ರಾಮದ ಜ್ಯೋತಿ ಶೇ. 90.24 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ಸೈ ಎನಿಸಿಕೊಂಡಿದ್ದಾಳೆ. ರೈತರಾದ ಮಾರುತಿ ಹಾಗೂ ಸುಮಂಗಲಾ ದಂಪತಿಯ ಪುತ್ರಿ ಐಎಎಸ್ ಪಾಸು ಮಾಡುವ ಕನಸು ಹೊಂದಿದ್ದಾಳೆ.

ಈಕೆ ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರಿನ ಜ್ಞಾನಸಿಂಧು ಅಂಧ ಮಕ್ಕಳ ವಸತಿ ಶಾಲೆಯ ವಿದ್ಯಾರ್ಥಿನಿ. ಬ್ರೈಲ್ ಲಿಪಿಯಲ್ಲಿ ಓದಿದ ಬಾಲಕಿ. ಮನೆಯಲ್ಲಿ ಸಾಮಾನ್ಯರಂತೆ ಎಲ್ಲ ಕೆಲಸ ಮಾಡುತ್ತ ತಾಯಿಗೆ ನೆರವಾಗುತ್ತಾಳೆ. ಅನಕ್ಷರಸ್ಥ ಕುಟುಂಬಕ್ಕೆ ಜ್ಯೋತಿ ಬೆಳಕಾಗಿದ್ದಾಳೆ. ಕನ್ನಡಕ್ಕೆ 118, ಇಂಗ್ಲಿಷಿಗೆ 100, ಹಿಂದಿಯಲ್ಲಿ 100, ಅರ್ಥ ಶಾಸ್ತ್ರ 88, ರಾಜ್ಯಶಾಸ್ತ್ರ 64, ಸಮಾಜಶಾಸ್ತ್ರ 94 ಸೇರಿ ಒಟ್ಟು 625ಕ್ಕೆ 564 ಅಂಕ ಪಡೆದಿದ್ದಾಳೆ.

ಜ್ಯೋತಿ ಡಿಡಿ ಚಂದನ ವಾಹಿನಿಯ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಳು. ಸಂಗೀತ, ಕಂಪ್ಯೂಟರ್​ನಲ್ಲಿ ಜ್ಞಾನ ಪಡೆದಿದ್ದಾಳೆ. ಜ್ಯೋತಿ ಸಾಧನೆಗೆ ಜ್ಞಾನಸಿಂಧು ಅಂಧ ಮಕ್ಕಳ ವಸತಿ ಶಾಲೆಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರು, ಹಾಗೂ ಗ್ರಾಮಸ್ಥರು ಅಭಿನಂದಿಸಿದ್ದಾರ

Spread the love

Related Articles

Leave a Reply

Your email address will not be published. Required fields are marked *

Back to top button