ಜಿಲ್ಲಾ ಸುದ್ದಿ

ಚಿಕ್ಕೋಡಿಯ ಅಂಜುಮನ್ ಇಸ್ಲಾಂ ಕಮಿಟಿಯಿಂದ 2 ಅಂಬ್ಯುಲೆನ್ಸ್ ಲೋಕಾರ್ಪಣೆ

ಕೊರೊನಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಕೊರೊನಾ ಸೋಂಕಿತರ ಅನುಕೂಲಕ್ಕಾಗಿ ಚಿಕ್ಕೋಡಿ ಪಟ್ಟಣದ ಅಂಜುಮನ್-ಏ-ಇಸ್ಲಾಂ ಕಮಿಟಿಯಿಂದ 2 ಅಂಬ್ಯುಲೇನ್ಸಗಳನ್ನು ಲೋಕಾರ್ಪಣೆ ಮಾಡಲಾಯಿತು. ಚಿಕ್ಕೋಡಿ ಪಟ್ಟಣದ ಅಂಜುಮನ್ ಇಸ್ಲಾಂ ಕಮಿಟಿ ಆವರಣದಲ್ಲಿ ಈ ಅಂಬ್ಯುಲೆನ್ಸ್​ಗಳಿಗೆ ಚಿಕ್ಕೋಡಿಯ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸಂತೋಷ ಕೊಣ್ಣೂರೆ ಅವರು ಚಾಲನೆ ನೀಡಿ ಪ್ರಶಂಶಿಸಿದರು.

ನಂತರ ಅಂಜುಮನ್ ಇಸ್ಲಾಂ ಕಮಿಟಿಯ ಅಧ್ಯಕ್ಷ ಮಹಮ್ಮದ್ ಈಸಾ ನಾಯಿಕವಾಡಿ ಅವರು ಮಾತನಾಡಿ ಮಾನವೀಯತೆ ದೃಷ್ಟಿಕೋನದಿಂದ ಕೊರೊನಾದಿಂದ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಸಹಕಾರವನ್ನು ಮಾಡುವ ಉದ್ದೇಶದಿಂದ ನಮ್ಮ ಅಂಜುಮನ್ ಇಸ್ಲಾಂ ಕಮಿಟಿಯು ಮುಂದೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಧ್ಯ ಕೊರೊನಾದ ಪರಿಸ್ಥಿತಿಯಲ್ಲಿ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇವತ್ತು ಅಂಜುಮನ್ ಇಸ್ಲಾಂ ಕಮಿಟಿಯಿಂದ ಅಂಬುಲೆನ್ಸ ಸೇವೆಯನ್ನು ಪ್ರಾರಂಭಿಸಿದ್ದೇವೆ. ಈ ಅಂಬುಲೆನ್ಸಗಳು ಕೊರೊನಾ ಸೋಂಕಿತರಿಗೆ ಹಾಗೂ ಕೊರೊನಾದಿಂದ ಸಾವನ್ನಪ್ಪಿದ ವ್ಯಕ್ತಿಗಳ ಶವಸಂಸ್ಕಾರ ಮಾಡುವುಕ್ಕೆ ಅನುಕೂಲವಾಗುತ್ತದೆ. ಅದೇ ರೀತಿ ಕೊರೊನಾ ರೋಗಿಗಳಿಗೆ ಉಚಿತವಾಗಿ ಆಕ್ಷಿಜನ ಪೂರೈಸುವುದು ಅದಲ್ಲದೇ ಜಾತ್ಯಾತೀತವಾಗಿ ಕೊರೊನಾದಿಂದ ಸಾವನ್ನಪ್ಪಿದ ವ್ಯಕ್ತಿಗಳ ಶವಸಂಸ್ಕಾರ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಪುರಸಭೆ ಸದಸ್ಯರಾದ ಗುಲಾಬ ಹುಸೇನ್ ಬಾಗವಾನ, ಇರ್ಫಾನ ಬೇಪಾರಿ, ರಿಯಾಜ್ ಟಂಕಸಾಳೆ, ಸಮೀರ ನಾಯಿಕವಾಡಿ, ಬಾಬಾಸಾಬ ಸದಲಗೆ, ಅಬ್ದುಲ್ ತಾಂಬಟ, ಬಬಲು ಸದಲಗೆ, ಯಾಕೂಬ ತಾಂಬಟ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button