ಜಿಲ್ಲಾ ಸುದ್ದಿಮನರಂಜನೆರಾಮನಗರಸಿನಿಮಾಸೆಲೆಬ್ರಿಟಿ

ರಾಮನಗರದ ಕಬ್ಬಾಳಮ್ಮ ದೇವಾಲಯಕ್ಕೆ ಭೇಟಿ ನೀಡಿದ ಚಿತ್ರನಟ ಸುದೀಪ್​​​ ಕುಟುಂಬ

ರಾಮನಗರ: ಜಿಲ್ಲೆಯ ಕನಕಪುರ ತಾಲೂಕಿನ ಸಾತನೂರು ಸಮೀಪದ ಕಬ್ಬಾಳಮ್ಮ ದೇವಾಲಯಕ್ಕೆ ಚಿತ್ರ ನಟ ಸುದೀಪ್ ಕುಟುಂಬ ಸಮೇತ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದರು.

ಶುಭ ಶುಕ್ರವಾರ ದಿನದಂದು ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ಆಗಮಿಸಿ ಕಿಚ್ಚ ಸುದೀಪ್ ಕಬ್ಬಾಳಮ್ಮಗೆ ವಿಶೇಷ ಪೂಜೆ ನೆರವೇರಿಸಿದರು. ಇದಕ್ಕೂ‌ ಮೊದಲು ವಿಶ್ವ ವಿಖ್ಯಾತ ಚನ್ನಪಟ್ಟಣದ ಗೌಡಗೆರೆ ಗ್ರಾಮದಲ್ಲಿ ಚಾಮುಂಡೇಶ್ವರಿ ವಿಗ್ರಹದ ದರ್ಶನ ಪಡೆದಿದ್ದರು. ನಂತರ ಕನಕಪುರಕ್ಕೆ ಆಗಮಿಸಿ ತಾಯಿ ಕಬ್ಬಾಳಮ್ಮ ದೇವರ ದರ್ಶನ ಪಡೆದುಕೊಂಡರು.

ಇಲ್ಲೂ ಕೂಡ‌ ಸಾವಿರಾರು ಕಿಚ್ಚ ಸುದೀಪ್‌ ಅಭಿಮಾನಿಗಳು ಕಿಚ್ಚನನ್ನ ನೋಡಲು‌ ನೂಕು ನುಗ್ಗಲು ಮಾಡಿಕೊಂಡರು. ಅಭಿಮಾನಿಗಳ ನಿಯಂತ್ರಣ ಮಾಡಲು ಪೋಲೀಸರು ಕೂಡ ಹರ ಸಾಹಸ ಪಟ್ಟರು.

Spread the love

Related Articles

Leave a Reply

Your email address will not be published. Required fields are marked *

Back to top button