Breaking NewsLatestಜಿಲ್ಲಾ ಸುದ್ದಿಬಳ್ಳಾರಿ

ಎಸಿಬಿ ಬಲೆಗೆ ಬಿದ್ದ ಸರ್ಕಾರಿ ಶಾಲಾ ಮುಖ್ಯಶಿಕ್ಷಕಿ

ಬಳ್ಳಾರಿ: ಶೌಚಗೃಹ ನಿರ್ಮಾಣಕ್ಕಾಗಿ ಸರ್ಕಾರ ಬಿಡುಗಡೆ ಮಾಡಿದ ಹಣಕ್ಕೆ ಕೈ ಚಾಚಿದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿಯೊಬ್ಬರು ಭ್ರಷ್ಟಾಚಾರ ವಿರೋಧಿ ದಳದ ಬಲೆಗೆ ಬಿದ್ದಿದ್ದಾರೆ. ಬಳ್ಳಾರಿಯ ರೇಡಿಯೋ ಪಾರ್ಕ್ ಬಳಿ ಇರುವ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಅಬೀದಾ ಬೇಗಂ ಲಂಚಕ್ಕೆ ಬೇಡಿಕೆ ಇಟ್ಟು ಎಸಿಬಿ ಬಲೆಗೆ ಬಿದ್ದಿದ್ದಾರೆ.

ಶಾಲೆಯಲ್ಲಿ ವಿಕಲಚೇತನ ಮಕ್ಕಳಿಗಾಗಿ ಶೌಚಗೃಹ ನಿರ್ಮಾಣ ಕಾಮಗಾಗಿ ಪೂರ್ಣಗೊಂಡಿರುವ ಕುರಿತು ದೃಢೀಕರಣ ಪತ್ರ ನೀಡಲು ಬಳ್ಳಾರಿಯ ಜಯನಗರ ಬಡಾವಣೆ ನಿವಾಸಿ, ಗುತ್ತಿಗೆದಾರ ಮೊಹಮ್ಮದ್ ಜುಲ್ಫೀಕರ್ ಎಂಬುವವರ ಬಳಿ ಅಬೀದಾ ಬೇಗಂ 10 ಸಾವಿರ ರೂ ಲಂಚ ಕೇಳಿದರು.

ಈ ಬಗ್ಗೆ ಮೊಹಮ್ಮದ್ ಎಸಿಬಿಗೆ ದೂರು ನೀಡಿದ್ದರು. ಬಳಿಕ ಅಬೀದಾಗೆ ಹಣ ನೀಡುವ ಸಂದರ್ಭದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಡಿವೈಎಸ್​ಪಿ ಸೂರ್ಯನಾರಾಯಣ್ ರಾವ್ ತಂಡ ದಾಳಿ ನಡೆಸಿದ್ದು ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button