ಜಿಲ್ಲಾ ಸುದ್ದಿಬಾಗಲಕೋಟೆ

ಶಿವಯೋಗ ಮಂದಿರದ ಅಧ್ಯಕ್ಷ ಹಾಲೆಕೆರೆಯ ಡಾ ಅಭಿನವ ಸಂಗನಬಸವ ಶ್ರೀ ಲಿಂಗೈಕ್ಯ

ಬಾಗಲಕೋಟೆ: ಶಿವಯೋಗಮಂದಿರದ ಅಧ್ಯಕ್ಷರು, ತ್ರಿವಿಧಿ ದಾಸೋಹಿ ಹಾಲಕೆರೆ , ನಿರಂಜನ ಹೇಮಕೂಟ ಸಿಂಹಾಸನಾಧೀಶ್ವರ, ತ್ರಿವಿಧ ದಾಸೋಹಿ ಜಗದ್ಗುರು ಡಾ. ಅಭಿನವ ಸಂಗನಬಸವ ಮಹಾಸ್ವಾಮಿಗಳು(85) ವಯೋಸಹಜ ಕಾಯಿಲೆಯಿಂದ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಲಿಂಗೈಕ್ಯರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಸಂಗನಬಸವ ಶ್ರೀಗಳು ಇವತ್ತು ಬೆಳಿಗ್ಗೆ 5ಗಂಟೆಗೆ ಲಿಂಗೈಕ್ಯರಾಗಿದ್ದು, ಅಪಾರ ಭಕ್ತರು,ವಟುಗಳನ್ನು ಅಗಲಿದ್ದಾರೆ. ಹಂಪಿ, ಹೊಸಪೇಟೆ, ಬಳ್ಳಾರಿ , ಹಾಲಕೆರೆ, ಶಿವಯೋಗ ಮಂದಿರದ ಅಧ್ಯಕ್ಷರಾಗಿ ನಾಡಿನ ಭಕ್ತರಿಗೆ ತ್ರಿವಿಧ ದಾಸೋಹದ ಮೂಲಕ ಭಕ್ತರ ಮನೆಮಾತಾಗಿದ್ದರು.

ಅಭಿನವ ಸಂಗನಬಸವ ಮಹಾಸ್ವಾಮಿಗಳ ಅಗಲಿಕೆಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ,ಸಂಸದ ಪಿಸಿ ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಸೂಚಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button