ನಾವು ಸತ್ತರೂ ಪರವಾಗಿಲ್ಲ, ನಮಗೆ ವ್ಯಾಕ್ಷಿನ್ ಹಾಕಬೇಡಿ : ಗ್ರಾಮಸ್ಥರ ಹಠ..!

ದೇವನಹಳ್ಳಿ : ಕೊರೊನದಿಂದ ನಾವು ಸತ್ತರೂ ಪರವಾಗಿಲ್ಲ, ನಮಗೆ ವ್ಯಾಕ್ಷಿನ್ ಹಾಕಬೇಡಿ ಎಂದು ಇಳಿವಯಸ್ಸಿನ ಬಹುತೇಕರು ಹಠ ಹಿಡಿದು ಆರೋಗ್ಯ ಇಲಾಖೆಯ ತಂಡವನ್ನು ದಂಗುಬಡಿಸಿದ ಘಟನೆ ಕುಂದಾಣ ಹೋಬಳಿಯ ಕೊಯಿರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮನಾಥಪುರದಲ್ಲಿ ನಡೆದಿದೆ.
ವೈದ್ಯರ ನಡೆ- ಹಳ್ಳಿಗಳ ಕಡೆ ಕಾರ್ಯಕ್ರಮ ನಿಮಿತ್ತ ಆರೋಗ್ಯ ಕಾರ್ಯಕರ್ತರ ತಂಡ ರಾಮನಾಥಪುರಕ್ಕೆ ತೆರಳಿದ್ಧಾಗ ಈ ಘಟನೆ ನಡೆದಿದೆ.
ವೈದ್ಯರ ತಂಡ ವ್ಯಾಕ್ಸಿನ್ ನೀಡಲು ಮುಂದಾದಾಗ ಇಳಿ ವಯಸ್ಸಿನ ಬಹುತೇಕರು ವ್ಯಾಕ್ಸಿನ್ ಹಾಕಿಸಿಕೊಳ್ಳುವುದಿಲ್ಲವೆಂದು ಹಠ ಹಿಡಿದರು. ಆರೋಗ್ಯ ಕಾರ್ಯಕರ್ತರು ಎಷ್ಟೇ ಮನವರಿಕೆ ಮಾಡಿಕೊಡಲು ಯತ್ನಿಸುತ್ತಿದ್ದರೂ ಹಲವರು ಲಸಿಕೆ ಪಡೆಯುವುದಕ್ಕೆ ನಿರಾಕರಿಸುತ್ತಿರುವುದು ಸಾಮಾನ್ಯವಾಗಿ ಕಂಡುಬಂತು.
ಪ್ರತಿಯೊಬ್ಬರೂ ಲಸಿಕೆ ಪಡೆಯುತ್ತಿದ್ದಾರೆ, ನೀವೂ ಪಡೆಯಿರಿ ಎಂದು ಆರೋಗ್ಯ ಕಾರ್ಯಕರ್ತರು ಎಷ್ಟೇ ಮನವರಿಕೆ ಮಾಡಿದರೂ ಅರ್ಥಮಾಡಿಕೊಳ್ಳದ ಜನ ನಮಗೆ ಲಸಿಕೆ ಬೇಡವೆಂದು ಅಂಗಲಾಚುವುದು ಅವರು ಒತ್ತಾಯಿಸಿದಾಗ ಬೈಯುವುದು ಮಾಡುತ್ತಿದ್ದಾರೆ. ಇದರಿಂದಾಗಿ ವೈದ್ಯರ ನಡೆ-ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಆರೋಗ್ಯ ಕಾರ್ಯಕರ್ತರ ತಂಡ ಜನರ ತಪ್ಪು ತಿಳುವಳಿಕೆಯಿಂದಾಗಿ ಹರಸಾಹಸಪಟ್ಟು ಲಸಿಕೆ ಹಾಕಬೇಕಾದ ಅನಿವಾರ್ಯತೆಗೆ ತಲುಪಿದಂತಾಗಿದೆ.
ಈ ಸಂದರ್ಭದಲ್ಲಿ ಕೊಯಿರಾ ಗ್ರಾಪಂ ಪ್ರಭಾರಿ ಪಿಡಿಒ ಪದ್ಮಾವತಮ್ಮ ಹಾಗೂ ಆಶಾ ಕಾರ್ಯಕರ್ತೆ ಅರುಣಾ, ಆರೋಗ್ಯ ಕಾರ್ಯಕರ್ತರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಕಾರ್ಯಕರ್ತೆಯರು ಇದ್ದರು.




