ಕಲಬುರ್ಗಿಜಿಲ್ಲಾ ಸುದ್ದಿಮಹಿಳೆವಿಶೇಷ

PSI ಆಗುವ ಆಸೆ: ಗರ್ಭಿಣಿ ಅನ್ನೋದು ಮರೆತು ಓಡಿದ ಗಟ್ಟಿಗಿತ್ತಿ ಮಹಿಳೆ

ವರದಿ : ವೀರೇಶ ಚಿನಗುಡಿ ಕಲಬುರಗಿ

ಕಲಬುರ್ಗಿ : ಆಕೆ ಇಂಜಿನಿಯರಿಂಗ್ ಪದವಿ ಮುಗಿಸಿದ ಮಹಿಳೆ, ಪೊಲೀಸ್ ಇಲಾಖೆಗೆ ಸೇರಬೇಕು ಅನ್ನೋದು ಆಕೆಯ ಮಹಾದಾಸೆ, ಪೊಲೀಸ್ ಆಗಲೇಬೇಕು ಅನ್ನೋ ಆಸೆ ಇಡೇರಿಸಿಕೊಳ್ಳಲು ಆಕೆ ತಗೆದುಕೊಂಂಡಿದ್ದು ಭಯಾನಕ ರಿಸ್ಕ್, ತನ್ನ ಮತ್ತು ತನ್ನ ಕಂದಮ್ಮನ ಪ್ರಾಣ ಪಣಕ್ಕೆ ಇಟ್ಟು ಹೋರಾಡಿದ ಈ ಗಟ್ಟಿಗಿತ್ತಿ ಸ್ಟೋರಿ ಇಲ್ಲಿದೆ ಓದಿ…

ಮೇಲೆ ಪೊಟೋದಲ್ಲಿ ಕಾಣುತ್ತಿರುವ 24 ವರ್ಷದ ಈ ಮಹಿಳೆಯ ಹೆಸರು ಅಶ್ವಿನಿ ಸಂತೋಷ್ ಕೊರೆ. ಮೂಲತಃ ಕರ್ನಾಟಕ ಗಡಿಭಾಗ ಬೀದರ ಜಿಲ್ಲೆಯವಳು. ಓದಿನಲ್ಲಿ ಚುರುಕಾಗಿರುವ ಇವರು ಇಂಜಿನಿಯರಿಂಗ್ ಪದವಿ ಪಡೆದಿದ್ದಾಳೆ. ಇಂಜಿನಿಯರಿಂಗ್ ಓದಿದ ಇವರಿಗೆ ಜಾಬ್ ಗಿಟ್ಟಿಸಿಕೊಳ್ಳುವದು ಅಷ್ಟೇನು ಕಷ್ಟದ ಕೆಲಸವಲ್ಲ. ಆದರೆ ಪೊಲೀಸ್ ಸಬ್ ಇನ್ಸ್​ಪೆಕ್ಟರ್​ ಆಗಬೇಕು ಎನ್ನುವ ದಿಟ್ಟವಾದ ಚಲ ಈಕೆಯಲ್ಲಿದೆ. ಇದೆ ಕಾರಣಕ್ಕೆ ಕಠಿಣ ಪರಿಶ್ರಮ ಕೂಡಾ ಮಾಡುತ್ತಿದ್ದಾಳೆ. ಈಗಾಗಲೇ ಎರಡು ಬಾರಿ ದೈಹಿಕ ಪರೀಕ್ಷೆಯಲ್ಲಿ ಪಾಸ್ ಆಗಿದ್ದು, ರಿಟನ್ ಟೆಸ್ಟ್ ಕ್ಲಿಯರ್ ಆಗಿಲ್ಲ, ಎರಡು ಬಾರಿ ಹಿನ್ನಡೆ ಅನುಭವಿಸಿದರೂ ಚಲ ಬಿಡದ ಅಶ್ವಿನಿ, ಮೂರನೇ ಪ್ರಯತ್ನಕ್ಕೆ ಮುಂದಾಗಿದ್ದಾಳೆ. ಆದರೆ ಮೂರನೇ ಪ್ರಯತ್ನದ ವೇಳೆಗೆ ಇವರು ಗರ್ಭಿಣಿಯಾಗಿದ್ದಾಳೆ.

400 ಮೀಟರ್ ಓಡಿದ ಗರ್ಭಿಣಿ :

ಅಚಲವಾದ ನಿರ್ಧಾರದಿಂದ ಹಿಂದೆ ಸರಿಯದ ಅಶ್ವಿನಿ, ತನ್ನ 10 ವಾರದ ಗರ್ಭಾವಸ್ಥೆಯಲ್ಲಿಯೇ ಎರಡು ಪ್ರಾಣ ಪಣಕ್ಕೆ ಇಟ್ಟು ಪಿಎಸ್​ಐ ದೈಹಿಕ ಪರೀಕ್ಷೆ ಪಾಲ್ಗೊಂಡಿದ್ದಾಳೆ. ಎರಡು ದಿನದ ಹಿಂದೆ ಕಲಬುರ್ಗಿಯ ಡಿಎಆರ್ ಮೈಧಾನದಲ್ಲಿ ನಡೆದ ಪೊಲೀಸ್ ಸಬ್ ಇನ್ಸ್​​​ ಪೆಕ್ಟರ್​​ ನೇಮಕಾತಿ ದೈಹಿಕ ಪರೀಕ್ಷೆಯಲ್ಲಿ 1.36 ನಿಮಿಷದಲ್ಲಿ 400 ಮೀಟರ್ ದೂರ ಓಡಿ ಗಟ್ಟಿತನ ಮೆರೆದಿದ್ದಾಳೆ. ಗರ್ಭಿಣಿಯಾದ ಅಶ್ವಿನಿಗೆ ದೈಹಿಕ ಪರೀಕ್ಷೆಯಲ್ಲಿ ಪಾಲ್ಗೊಳ್ಳುವದು ಬೇಡ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಆದರೂ ಅಶ್ವಿನಿ ತನ್ನ ಜೀವ ಮಾತ್ರವಲ್ಲ ತನ್ನ ಕಂದಮ್ಮನ ಜೀವ ಕೂಡಾ ಪಣಕ್ಕೆ ಇಟ್ಟು ಹೋರಾಡಿದ್ದಾಳೆ. ಈ ಬಗ್ಗೆ ಈಶಾನ್ಯ ವಲಯ ಐಜಿಪಿ ಮನೀಶ್ ಕರ್ಬಿಕರ್ ಅವರನ್ನು ಕೇಳಿದರೆ ನೇಮಕಾತಿಗೆ ಸಮಿತಿ ರಚಿಸಲಾಗಿದೆ. ಗರ್ಭಿಣಿ ಇರುವದು ಸಮಿತಿಯ ಗಮನಕ್ಕೆ ಬಂದಿಲ್ಲ, ಗರ್ಭಿಣಿಯರು ಪೊಲೀಸ್ ದೈಹಿಕ ಪರೀಕ್ಷೆಯಲ್ಲಿ ಪಾಲ್ಗೊಳ್ಳುವಂತಿಲ್ಲ, ಇದಕ್ಕೆ ಇಲಾಖೆ ಅನುಮತಿ ಕೂಡಾ ಕೊಡುವದಿಲ್ಲ. ಹಾಗಾಗಿ ಮಹಿಳೆಯರು ತಮ್ಮ ಗರ್ಭಾವಸ್ಥೆಯನ್ನು ಮುಚ್ಚಿಡುತ್ತಾರೆ ಎಂದಿದ್ದಾರೆ.

ಮನುಷ್ಯ ಇಟ್ಟುಕೊಂಡಿರುವ ಗುರಿ ತಲುಪಬೇಕಾದರೆ ಕಠಿಣ ಪರಿಶ್ರಮ ಅಗತ್ಯ, ಜೊತೆಗೆ ಕೆಲ ಸಂದರ್ಭಗಳಲ್ಲಿ ಒಂದಿಷ್ಟು ರಿಸ್ಕ್ ಕೂಡ ಬೇಕು‌. ಆದರೆ ಈ ಮಹಿಳೆ ಎರಡು ಪ್ರಾಣ ಪಣಕ್ಕೆ ಇಡುವ ರಿಸ್ಕ್ ತೊಗೊಂಡಿದ್ದು ಸರಿನಾ? ಎಂಬ ಪ್ರಶ್ನೆ ಎದುರಾಗಿದೆ. ಅದೇನೆ ಇರಲಿ ಗರ್ಭಾವಸ್ಥೆಯಲ್ಲಿಯೂ ಗಟ್ಟಿತನ‌ ಮೇರೆದ ಅಶ್ವಿನಿ ತನ್ನ ಆಸೆಯಂತೆ ಸಬ್ ಇನ್ಸ್​​ಪೆಕ್ಟರ್​ ಆಗಲಿ ಅಂತ ಆಶಿಸೋಣ…!

Related Articles

Leave a Reply

Your email address will not be published. Required fields are marked *

Back to top button