ಜಿಲ್ಲಾ ಸುದ್ದಿರಾಮನಗರ
ಆಗ ಜನಿಸಿದ ನವಜಾತ ಶಿಶು ಪಾರ್ಕ್ ನಲ್ಲಿ ಪತ್ತೆ

ರಾಮನಗರ: ಹೆತ್ತತಾಯಿ ಆಗ ತಾನೆ ಹುಟ್ಟಿದ ನವಜಾತ ಶಿಶುವನ್ನ ಪಾರ್ಕ್ ನ ಪೊದೆಯಲ್ಲಿ ಹಾಕಿ ಹೋಗಿರುವ ಘಟನೆ ಚನ್ನಪಟ್ಟಣದ ಹೌಸಿಂಗ್ ಬೋರ್ಡ್ ಉದ್ಯಾನವನದಲ್ಲಿ ಪತ್ತೆಯಾಗಿದೆ.
ತಡರಾತ್ರಿ ಜನಿಸಿದ ಹೆಣ್ಣು ಶಿಶುವನ್ನು ಜನಿಸಿದ ತಕ್ಷಣವೇ ಬಟ್ಟೆ ಹಾಗೂ ಚೀಲದಲ್ಲಿ ಸುತ್ತಿ ಪಾರ್ಕ್ ನಲ್ಲಿಹಾಕಿ ಹೋಗಿದ್ದಾರೆ. ಮುಂಜಾನೆ ವಾಯು ವಿಹಾರಕ್ಕೆ ತೆರಳಿದ್ದವರು ಇದನ್ನು ಗಮನಿಸಿ ಪೊಲೀಸರು ಹಾಗೂ ಶಿಶು ಮಹಿಳಾ ಮತ್ತು ಶಿಶು ಅಭಿವೃದ್ಧಿ ಅಧಿಕಾರಿಗಳ ಕಚೇರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಬಂದ ಸಿಡಿಪಿಒ ಸಿದ್ದಲಿಂಗಯ್ಯ ಮತ್ತು ಚನ್ನಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಶಿಶುವನ್ನು ಸಾರ್ವಜನಿಕ ಆಸ್ಪತ್ರೆಗೆ ಕೊಂಡೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.




