World Record: ಬಾಟಲ್ ತಿರುಗಿಸಿವುದರಲ್ಲಿ ವಿಶ್ವ ದಾಖಲೆ ಬರೆದ ಕುಂದಗೋಳದ ಯುವತಿ

ಹುಬ್ಬಳ್ಳಿ : ಇತ್ತೀಚೆಗೆ ಮಹಿಳೆಯರು ನಾವು ಯಾವುದರಲ್ಲಿಯು ಕಡಿಮೆ ಇಲ್ಲ ಎಂಬುವುದನ್ನು ಪದೇ ಪದೇ ಸಾಬೀತು ಮಾಡುತ್ತಾಲೇ ಬರುತ್ತಿದ್ದಾರೆ. ಕಿತ್ತು ತಿನ್ನುವ ಬಡತನದ ಮಧ್ಯೆ ಇಲ್ಲೊಬ್ಬ ಯುವತಿ ಈಗ ಎಲ್ಲರ ಗಮನವನ್ನು ತನ್ನ ಕಡೆಗೆ ಸೆಳೆಯುವಂತೆ ಮಾಡಿದ್ದು, ತೊಟ್ಟಿಲನ್ನು ತೂಗುವ ಕೈ ಜಗತ್ತನೇ ಆಳಬಲ್ಲದು ಎಂಬುವಂತ ಗಾದೆಗೆ ನಿದರ್ಶನ ಎಂಬಂತೆ ಈ ಯುವತಿ ಸಾಧನೆ ಮಾಡಿದ್ದಾಳೆ. ಕುಂದಗೋಳದ ಬೆಟದೂರ ಮಹಿಳೆಯ ಸಾಧನೆ ಕೇಳಿದ ಹುಡುಗರು ಈಗ ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುತ್ತಿದ್ದಾರೆ.
ಸಾಮಾನ್ಯವಾಗಿ ದೊಡ್ಡ ದೊಡ್ಡ ಬಾರ್ ಗಳಲ್ಲಿ ಬಾರ್ ಟೆಂಡರ್ ಗಳನ್ನು ನೀವು ನೋಡಿರುತ್ತೀರಿ. ಬಾರ್‌ಗೆ ಹೋದ ಯುವ ಸಮುದಾಯ ಮದ್ಯವನ್ನು ನೀಡುವ ಯುವಕರು ಬಾಟಲಿ ತಿರುಗಿಸುವುದನ್ನು ನೋಡಿಯೇ ಹೌ ಹಾರಿರುತ್ತೇವೆ. ಅಂತದರಲ್ಲಿ ಇಲ್ಲೊರ್ವ ಯುವತಿ ಗ್ರಾಮೀಣ ಪ್ರದೇಶದಿಂದ ಬಂದು ಇದೀಗ ವಿಶ್ವ ದಾಖಲೆ ಬರೆದಿದ್ದಾಳೆ.

ಭಾರತದಲ್ಲಿಯೇ ದಾಖಲೆ ಬರೆದ ಮೊದಲ ಗ್ರಾಮೀಣ ಮಹಿಳೆ :
ಇವರು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬೆಟದೂರು ಗ್ರಾಮದ ಕವಿತಾ ಮೇದಾರ, ಹೀಗೆ ಇವರ ಈ ಕಲೆಗೆ ಜಗ್ಲಿಂಗ್ ಮತ್ತು ಫೆರಿಂಗ್ ಅಂತ ಹೆಸರು. ಸಾಮಾನ್ಯವಾಗಿ ಸಿನಿಮಾಗಳಲ್ಲಿ ಅಥವಾ ದೊಡ್ಡ ದೊಡ್ಡ ಪಬ್, ಬಾರ್ ಗಳಲ್ಲಿ ಈ ರೀತಿಯಾಗಿ ಹುಡುಗರು ತಿರುಗಿಸುವುದನ್ನ ನೀವು ನೋಡಿರುತ್ತಿರಾ. ಆದರೆ ಇದನ್ನು ಈ ಯುವತಿ ಕಲಿತಿದ್ದು, ಇದರಲ್ಲಿಯೇ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ನಮೂದಿಸಿಕೊಳ್ಳುವ ಮೂಲಕ ಸಾಧನೆ ಮಾಡಿದ್ದಾಳೆ. ಅಲ್ಲದೆ ಭಾರತದಲ್ಲಿಯೇ ಜಗಲಿಂಗ್ ಆ್ಯಂಡ್ ಫೇರಿಂಗ್ ನಲ್ಲಿ ದಾಖಲೆ ಬರೆದ ಮೊದಲ ಮಹಿಳೆ ಎಂಬ ಕೀರ್ತಿಗೆ ಇವರು ಪಾತ್ರರಾಗಿದ್ದಾರೆ.
ಸ್ವಿಟ್ಜರ್ಲ್ಯಾಂಡ್ ನಲ್ಲಿ ನಡೆಯುವ ಸ್ಪರ್ಧೆಗೆ ಈಗಾಗಲೇ ಕವಿತಾ ಆಯ್ಕೆ:
ಇನ್ನೂ ಇದನ್ನೆಲ್ಲ ಕಲಿಬೇಕು ಅಂತ ಸುಮ್ಮನೆ ಮಾತಲ್ಲಿ ನೋಡೋಕೆ ಎಷ್ಟು ರೋಮಾಂಚನವಾಗುತ್ತದೆಯೋ ಇದನ್ನು ಕಲಿಯೋದು ಅಷ್ಟೇ ಟಫ್ ಕೂಡ. ಲಾಕ್ ಡೌನ್ ಸಮಯವನ್ನು ಸದುಪಯೋಗ ಪಡಿಸಿಕೊಂಡ ಕವಿತಾ ಪುಣೆಯಲ್ಲಿ ತರಬೇತಿ ಪಡೆದು ಸದ್ಯ ವಿಶ್ವ ಬುಕ್ ಆಫ್ ರೆಕಾರ್ಡ್ ನಲ್ಲಿ ತಮ್ಮ ಹೆಸರನ್ನು ಅಚ್ಚೊತ್ತಿದ್ದಾಳೆ. ಸ್ವಿಟ್ಜರ್ಲ್ಯಾಂಡ್ ನಲ್ಲಿ ನಡೆಯುವ ಸ್ಪರ್ಧೆಗೆ ಈಗಾಗಲೇ ಕವಿತಾ ಆಯ್ಕೆಯಾಗಿದ್ದರು. ಆದರೆ ಹಣದ ತೊಂದರೆ ಆಗಿತ್ತು. ಅದೃಷ್ಟವಶಾತ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ತಂಡ ಭಾರತಕ್ಕೆ ಬಂದು ಸ್ಪರ್ಧೆ ಏರ್ಪಡಿಸಿ ಮಹಿಳೆಯ ದಾಖಲೆಗೆ ಮುನ್ನುಡಿ ಬರೆದಿದ್ದಾರೆ. ಇವಳ ಸಾಧನೆ ಭಾರತ ಮಾತ್ರವಲ್ಲದೆ ಜಗತ್ತಿನ ಪ್ರಶಂಸೆಗೆ ಪಾತ್ರವಾಗುವಂತೆ ಮಾಡಿದೆ.

ಮಹಿಳೆ ಅಂದರೇ ಮನೆಯ ಕೆಲಸಕ್ಕೆ ಮಾತ್ರ ಸೀಮಿತವಾಗಿರದೆ, ಹೊಸ ಸಾಧನೆ ಮಾಡಬೇಕು ಎಂಬುವುದನ್ನು ಕವಿತಾ ತೋರಿಸಿಕೊಟ್ಟಿದ್ದಾರೆ. ಕವಿತಾಳ ಕೀರ್ತಿ ಇನ್ನಷ್ಟು ವ್ಯಾಪಿಸಲಿ. ಸರ್ಕಾರ ಸಂಘ ಸಂಸ್ಥೆಗಳು ಏನಾದರೂ ಸಹಾಯ ಸೌಲಭ್ಯಗಳನ್ನು ನೀಡಲಿ ಎಂಬುವುದು ನಮ್ಮ ಆಶಯ.



