ಜಿಲ್ಲಾ ಸುದ್ದಿ
ಹೆದ್ದಾರಿಗಳ ಅಭಿವೃದ್ಧಿಗೆ 369 ಕೋಟಿ ಮಂಜೂರು; ಸಂಸದೆ ಶೋಭಾ ಕರಂದ್ಲಾಜೆ ಮಾಹಿತಿ

ಚಿಕ್ಕಮಗಳೂರು: ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿಗಳ ಸಮಗ್ರ ಅಭಿವೃದ್ಧಿಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಒಟ್ಟು 369 ಕೋಟಿ ಅನುದಾನವನ್ನು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಮಂಜೂರು ಮಾಡಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ರಾ.ಹೆ.169ಎ ಹೆಬ್ರಿ-ಪರ್ಕಳ ರಸ್ತೆ, ಕರಾವಳಿ ಜಂಕ್ಷನ್-ಮಲ್ಪೆ ಸಂಪರ್ಕಿಸುವ ರಸ್ತೆಗಳನ್ನು ಚತುಷ್ಪಥ ರಸ್ತೆಗಳಾಗಿ ಮಾರ್ಪಡಿಸಲು ಅಗತ್ಯವುಳ್ಳ ಭೂಸ್ವಾಧೀನ ಪ್ರಕ್ರಿಯೆಗೆ ಅನುಮತಿ ದೊರಕಿದೆ. ಅಲ್ಲದೆ 29.1 ಕಿ.ಮೀ ಉದ್ದದ ಕಾಮಗಾರಿಗಳಿಗೆ ಭೂ ಸಾರಿಗೆ ಸಚಿವಾಲಯ ಅಂದಾಜು ಮೊತ್ತ 350 ಕೋಟಿ ಅನುದಾನ ಮಂಜೂರು ಮಾಡಿ ಕಾಮಗಾರಿಗೆ ಅನುಮೋದನೆ ನೀಡಿದೆ ಎಂದು ಮಾಹಿತಿ ನೀಡಿದರು.
ಮಳೆ ವೈಪರೀತ್ಯದ ವೇಳೆ ರಾ.ಹೆ. 169ಎ ಸೀತಾನದಿ ಬಳಿಯಲ್ಲಿ ಉಂಟಾಗುವ ಭೂಕುಸಿತ, ಹಾನಿಗಳನ್ನು ತಪ್ಪಿಸಲು ತಡೆಗೋಡೆ ಹಾಗೂ ರಸ್ತೆಯನ್ನು ಎತ್ತರಿಸುವ ಕಾಮಗಾರಿಗಳಿಗೆ ಅಂದಾಜು 19 ಕೋಟಿ ರೂ. ಅನುಮೋದನೆ ದೊರಕಿದೆ ಎಂದು ತಿಳಿಸಿದ್ದಾರೆ.




