Breaking Newsಉತ್ತರ ಕನ್ನಡಜಿಲ್ಲಾ ಸುದ್ದಿ
ಗೋಕರ್ಣದಲ್ಲಿ ಈಜಲು ತೆರಳಿದ್ದ ಬೆಂಗಳೂರಿನ ಮೂವರು ಪ್ರವಾಸಿಗರ ರಕ್ಷಣೆ

ಕಾರವಾರ : ನೀರಿನಲ್ಲಿ ಮುಳುಗುತ್ತಿದ್ದ ಮೂವರು ಪ್ರವಾಸಿಗರನ್ನು ಲೈಪ್ ಗಾರ್ಡ್ ಮತ್ತು ಪ್ರವಾಸಿ ಮಿತ್ರ ಸಿಬ್ಬಂದಿಗಳು ರಕ್ಷಣೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಕುಡ್ಲೆ ಕಡಲ ತೀರದಲ್ಲಿ ನಡೆದಿದೆ. ರಾಘವೇಂದ್ರ (24), ಅರುಣಕೃಷ್ಣ (25), ಗ್ರೀಷ್ಮಾ (23) ರಕ್ಷಣೆಗೊಳಗಾದವರಾಗಿದ್ದಾರೆ
ಮೂವರು ಬೆಂಗಳೂರಿನಿಂದ ಗೋಕರ್ಣ ಪ್ರವಾಸಕ್ಕೆ ಬಂದಿದ್ದರು. ಲೈಪ್ ಗಾರ್ಡ್ ಮತ್ತು ಪ್ರವಾಸಿ ಮಿತ್ರ ಸಿಬ್ಬಂದಿಗಳಾದ ರಾಜು ಅಂಬಿಗ, ನಾಗೇಂದ್ರ ಕುರ್ಲೆ, ಶೇಖರ ಹರಿಕಂತ್ರ, ಉಲ್ಲಾಸ ಅವರಿಂದ ರಕ್ಷಣೆ ಮಾಡಲಾಗಿದೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
