ಜಿಲ್ಲಾ ಸುದ್ದಿದಾವಣಗೆರೆ
ಜೋಕಾಲಿ ತಂದ ಆಪತ್ತು: ಜಗಳೂರಲ್ಲಿ ಬಾಲಕಿ ಸಾವು…!

ದಾವಣಗೆರೆ: ಜೋಕಾಲಿ ಆಡುತ್ತಿದ್ದಾಗ ಬಾಲಕಿ ಕುತ್ತಿಗೆಗೆ ಹಗ್ಗ ಸುತ್ತಿಕೊಂಡು ಬಾಲಕಿ ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆ ಜಗಳೂರು ಪಟ್ಟಣದ ಅಶ್ವತ್ಥ ಬಡಾವಣೆಯಲ್ಲಿ ನಡೆದಿದೆ.
ನಿನ್ನೆ ಮಧ್ಯಾಹ್ನ ಜೋಕಾಲಿ ಆಡುವಾಗ ಬಾಲಕಿಯ ಕುತ್ತಿಗೆಗೆ ಸಿಲುಕಿಕೊಂಡು ಉಸಿರುಗಟ್ಟಿ ಮೃತಪಟ್ಟಿದ್ದಾಳೆ. 12 ವರ್ಷದ ಬಾಲಕಿ ಸಿಮ್ರನ್ ಖಾನ್ ಮೃತ ದುರ್ದೈವಿ. ಮನೆಯಲ್ಲಿ ಯಾರೂ ಇಲ್ಲದೆ ವೇಳೆ ಈ ದುರ್ಘಘಟನೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಜಗಳೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.




