Breaking NewsLatestಕ್ರೈಂಮನರಂಜನೆಸಿನಿಮಾಸ್ಯಾಂಡಲ್ ವುಡ್

ಸ್ಯಾಂಡಲ್ ವುಡ್ ಸ್ಟಾರ್ ನಟಿಯ ಸಹೋದರನ ಮೇಲೆ ಅತ್ಯಾಚಾರ ದೂರು ದಾಖಲು

ಸ್ಯಾಂಡಲ್ ವುಡ್ ಸ್ಟಾರ್ ನಟಿಯ ಸಹೋದರನ ಮೇಲೆ ಯುವತಿಯೋರ್ವಳು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಯಾಂಡಲ್ ವುಡ್ ನ ಖ್ಯಾತ ನಟಿಯ ಸಹೋದರ ಕೀರ್ತಿ ಚಂದ್ರ ಅಲಿಯಾಸ್ ವಿರಾಜ್ ಮೇಲೆ ಸಂತ್ರಸ್ತ ಯುವತಿ ದೂರು ದಾಖಲಿಸಿದ್ದಾರೆ. ಆರೋಪಿ ತನ್ನ ತಂಗಿ ಖ್ಯಾತ ಸಿನಿಮಾ ನಟಿ ಎಂದು ಹೇಳಿಕೊಂಡು ಯುವತಿಯನ್ನ ಪರಿಚಯ ಮಾಡಿಕೊಂಡಿದ್ದ. ತಾನು ನಗರದ ಪ್ರತಿಷ್ಠಿತ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು ನಿನ್ನನ್ನ ಮದುವೆಯಾಗುತ್ತೇನೆ ಎಂದು ಯುವತಿಯನ್ನ ನಂಬಿಸಿ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾಗಿ ಯುವತಿ ದೂರಿನಲ್ಲಿ ದಾಖಲಿಸಿದ್ದಾರೆ.

ಯುವತಿ ಮ್ಯಾಟ್ರಿಮೋನಿ ವೆಬ್ ಸೈಟ್ ನಲ್ಲಿ ಸ್ವವಿವರ ಹಾಕಿದ್ದರು. ಈ ವೇಳೆ ಮೇಸೆಜ್ ಮಾಡಿದ ಆರೋಪಿ ತಾನು ಪ್ರತಿಷ್ಠಿತ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು ನನ್ನ ತಂಗಿ ಖ್ಯಾತ ಸಿನಿ ತಾರೆ. ನಾನು ಬೆಂಗಳೂರಿನ ಹೊಸಕೆರೆ ಹಳ್ಳಿಯಲ್ಲಿ ವಾಸವಾಗಿರೋದಾಗಿ ಮೆಸೆಜ್ ಮಾಡಿದ್ದಾನೆ. ಬಳಿಕ  ಚಾಟಿಂಗ್ ನಡೆಸಿದ್ದು ಈ ವೇಳೆ ಆರೋಪಿ ಯುವತಿಗೆ ಮದುವೆಯಾಗೋದಾಗಿ ನಂಬಿಸಿದ್ದಾನೆ.

ಜನವರಿ 18ರಂದು ಯುವತಿಗೆ ಜಯನಗರದ ಖಾಸಗಿ ಹೋಟೆಲ್ ಗೆ ಬರುವಂತೆ ತಿಳಿಸಿದ್ದಾನೆ. ಈ ವೇಳೆ ಯುವತಿಯ ಜೊತೆ ಮದುವೆಯಾಗುವುದಾಗಿ ಹೇಳಿ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ.ಬಳಿಕ ಆರೋಪ ಕೀರ್ತಿ ಚಂದ್ರ ಸಂಪರ್ಕಕ್ಕೆ ಸಿಗುತ್ತಿಲ್ಲ. ಸುಳ್ಳು ಭರವಸೆ ನೀಡಿ ಒತ್ತಾಯ ಪೂರ್ವಕವಾಗಿ ದೈಹಿಕ ಸಂಪರ್ಕ ನಡೆಸಿ ಮೋಸ ಮಾಡಿದ್ದಾಗಿ ಯುವತಿ ದೂರಿನಲ್ಲಿ ದಾಖಲಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button