IPL 2022ಕ್ರಿಕೆಟ್ಕ್ರೀಡೆ

ಪ್ಯಾಟ್ ಕಮಿನ್ಸ್ ಅಬ್ಬರದ ಬ್ಯಾಟಿಂಗ್: ಕೆಕೆಆರ್ ತಂಡಕ್ಕೆ ಜಯ

ಪುಣೆ: ಮುಂಬೈ ಇಂಡಿಯನ್ಸ್‌ ಎದುರು ಕೇವಲ 15 ಎಸೆತಗಳಲ್ಲಿ 56 ರನ್ ಚಚ್ಚಿ ಕೋಲ್ಕತಾ ನೈಟ್‌ ರೈಡರ್ಸ್ ತಂಡದ 5 ವಿಕೆಟ್‌ಗಳ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ ಪ್ಯಾಟ್‌ ಕಮಿನ್ಸ್ ತಮ್ಮ ಸ್ಪೋಟಕ ಬ್ಯಾಟಿಂಗ್‌ ಬಗ್ಗೆ ತಾವೇ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಕೊಲ್ಕತ್ತಾ ತಂಡವು ಆರಂಭದಲ್ಲಿ ಬಿಗುವಿನ ಬೌಲಿಂಗ್ ದಾಳಿ ನಡೆಸಿ ಮುಂಬೈ ಇಂಡಿಯನ್ಸ್ ತಂಡದ ನಾಲ್ಕು ವಿಕೆಟ್ ಕಬಳಿಸುವ ಮೂಲಕ 20 ಓವರ್ ಗಳಲ್ಲಿ 161 ರನ್ ಗಳಿಗೆ ನಿಯಂತ್ರಿಸಿತು. ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಭರ್ಜರಿ ಬ್ಯಾಟಿಂಗ್ ಮಾಡಿದ ಸೂರ್ಯಕುಮಾರ್ ಯಾದವ್ 36 ಎಸೆತಗಳಲ್ಲಿ ಎರಡು ಭರ್ಜರಿ ಸಿಕ್ಸರ್ ಹಾಗೂ ಐದು ಬೌಂಡರಿಗಳೊಂದಿಗೆ 52 ರನ್ ಗಳಿಸಿದರು. ಕೊನೆಯಲ್ಲಿ ತಿಲಕ್ ವರ್ಮಾ ಅವರು 27 ಎಸೆತಗಳಲ್ಲಿ 38 ರನ್ ಗಳಿಸಿದರೆ, ಪೋಲ್ಲಾರ್ಡ್ ಅವರು ಐದು ಎಸೆತಗಳಲ್ಲಿ ಮೂರು ಸಿಕ್ಸರ್ ಗಳ ನೆರವಿನಿಂದ 22 ರನ್ ಗಳಿಸಿದರು.

ಆ ಮೂಲಕ 161 ರನ್ ಗಳ ಗಡಿಯನ್ನು ತಲುಪಲು ನೆರವಾದರು. ಕೋಲ್ಕತ್ತಾ ತಂಡದ ಪರವಾಗಿ ಪ್ಯಾಟ್ ಕಮಿನ್ಸ್ ಎರಡು ವಿಕೆಟ್ ಕಬಳಿಸಿದರೆ ಉಮೇಶ್ ಯಾದವ್ ಹಾಗೂ ಚಕ್ರವರ್ತಿ ತಲಾ ಒಂದು ವಿಕೆಟ್ ಪಡೆದರು.

Spread the love

Related Articles

Leave a Reply

Your email address will not be published. Required fields are marked *

Back to top button