ಕ್ರಿಕೆಟ್ಕ್ರೀಡೆಮನರಂಜನೆಸಿನಿಮಾಸೆಲೆಬ್ರಿಟಿ

Sourav Ganguly BIOPIC: ಸೌರವ್ ಗಂಗೂಲಿ ಜೀವನ ಚರಿತ್ರೆ ಬಾಲಿವುಡ್ ಚಿತ್ರವಾಗಲಿದೆ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಅತ್ಯುತ್ತಮ ವೃತ್ತಿ ಜೀವನವನ್ನು ಹೊಂದಿದ್ದು, ಅವರ ಜೀವನ ಪ್ರಯಾಣ ಇದೀಗ ಬಾಲಿವುಡ್ ಬೆಳ್ಳಿತೆರೆಯಲ್ಲಿ ಮೂಡಿಬರಲು ತಯಾರಾಗಿದೆಯಂತೆ. ಈ ಚಿತ್ರವನ್ನು ನಿರ್ಮಾಪಕ ಲುವ್ ರಂಜಾನ್ ನಿರ್ಮಿಸಲಿದ್ದು, ಈ ಬಗ್ಗೆ ದೃಢೀಕರಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸೌರವ್ ಗಂಗೂಲಿ, ಕ್ರಿಕೆಟ್ ನನ್ನ ಜೀವನ. ಅದು ಆತ್ಮವಿಶ್ವಾಸ ಮತ್ತು ನನ್ನ ತಲೆಯನ್ನು ಮೇಲಕ್ಕೆತ್ತಿ ಸಾಗುವ ಸಾಮಾರ್ಥ್ಯವನ್ನು ನೀಡಿತು. ಈಗ ಲುವ್ ಫಿಲ್ಸಂ ನನ್ನ ಪ್ರಯಾಣವನ್ನು ಸಿನಿಮಾ ಮಾಡುತ್ತಿರುವುದು ಖುಷಿ ನೀಡಿದೆ ಎಂದು ಟ್ವೀಟರ್ ನಲ್ಲಿ ತಿಳಿಸಿದ್ದಾರೆ.

ಈ ಚಿತ್ರ ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್ ಟೀಂ ನಾಯಕರಾದ ಮತ್ತು ದೇಶಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಬಿಸಿಸಿಐ ಅಧ್ಯಕ್ಷರಾಗುವ ಪ್ರಯಾಣವನ್ನು ಸೆರೆಹಿಡಿಯುತ್ತದೆ. ಗಂಗೂಲಿ ಪಾತ್ರವನ್ನು ನಿರ್ವಹಿಸುವ ನಟನ್ನು ಇನ್ನೂ ಆಯ್ಕೆ ಮಾಡಿಲ್ಲ. ಆದರೆ ಈ ಹಿಂದೆ ಸೌರವ್ ಗಂಗೂಲಿ ನಟ ರಣಬೀರ್ ಕಪೂರ್ ತನ್ನ ಜೀವನಚರಿತ್ರೆಯಲ್ಲಿ ತನ್ನ ಪಾತ್ರವನ್ನು ನಿರ್ವಹಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button