ವಾಣಿಜ್ಯ

Gold Rate: ಚಿನ್ನ ಪ್ರಿಯರಿಗೆ ಸಿಹಿ ಸುದ್ದಿ, ಇಳಿಕೆ ಕಂಡ ಚಿನ್ನದ ದರ

ನವದೆಹಲಿ: ಕೊರೊನಾ ಅಬ್ಬರದಿಂದ ಚಿನ್ನದ ದರ ಗಗನಕ್ಕೇರಿತ್ತು. ಸ್ವಲ್ಪ ಕೊರೊನಾ ಕಡಿಮೆ ಆದ್ರೂ ಕೂಡ ಇಳಿಕೆಯ ಹಾದಿ ಹಿಡಿದಿರಲಿಲ್ಲ. ಆದ್ರೆ ಇದೀಗ ಹೊಸ ವರ್ಷಕ್ಕೆ ಚಿನ್ನ ಪ್ರಿಯರಿಗೆ ಸಿಹಿ ಸಿಕ್ಕಿದೆ.

ಹೌದು ಇಷ್ಟು ದಿನ ಚಿನ್ನದ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿತ್ತು. ಈಗ ಕೊಂಚ ಬದಲಾವಣೆ ಕಂಡಿದೆ. ದೇಶದಲ್ಲಿ ಈಗಿನ ದರ ಎಷ್ಟಿದೆ ನೋಡೋಣ

ದೇಶದಲ್ಲಿ ಇಂದು 24 ಕ್ಯಾರೆಟ್ ಚಿನ್ನದ (10 ಗ್ರಾಂ) ಚಿನ್ನದ ಬೆಲೆ 49,640 ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ (10 ಗ್ರಾಂ) ಬೆಲೆ 45,450 ರೂ. ಇದೆ.

ಕಳೆದ 24 ಗಂಟೆಗಳಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ(Gold Price) 400 ರೂಪಾಯಿ ಮತ್ತು 10 ಗ್ರಾಂ 24 ಕ್ಯಾರೆಟ್‌ಗೆ 190 ರೂಪಾಯಿ ಇಳಿಕೆಯಾಗಿದೆ. ನಿನ್ನೆ, 24 ಕ್ಯಾರೆಟ್ ಚಿನ್ನದ (10 ಗ್ರಾಂ) ಬೆಲೆ 49,830 ರೂ ಆಗಿದ್ದರೆ, 22 ಕ್ಯಾರೆಟ್ ಚಿನ್ನ (10 ಗ್ರಾಂ) 45,900 ರೂ. ಇತ್ತು.

Spread the love

Related Articles

Leave a Reply

Your email address will not be published. Required fields are marked *

Back to top button