Breaking NewsLatestಮೆಟ್ರೋರಾಜ್ಯಸುದ್ದಿ

ವಾರಾಂತ್ಯದ ಕರ್ಫ್ಯೂ, ಹೊಸ ಮಾರ್ಗಸೂಚಿಯಲ್ಲಿ ಯಾವುದಕ್ಕೆ ಅವಕಾಶ ? ಯಾವುದಕ್ಕೆ ಇಲ್ಲ ? ಯಾವುದಕ್ಕೆ ನಿರ್ಬಂಧ ?

Covid New Guidlines in Karnataka: ರಾಜ್ಯದಲ್ಲಿ ಓಮಿಕ್ರಾನ್ ಮತ್ತು ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದರಿಂದ ಬುಧವಾರ ರಾತ್ರಿ 10 ಗಂಟೆಯಿಂದ ಮುಂದಿನ ಎರಡು ವಾರ ರಾಜ್ಯ ಸರ್ಕಾರ ಕಠಿಣ ನಿಮಯಗಳನ್ನು ಜಾರಿಗೊಳಿಸಿ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಕೋವಿಡ್ ನಿಯಮಾವಳಿಗಳ ಕಟ್ಟುನಿಟ್ಟಿನ ಪರಿಪಾಲನೆ ಜತೆಗೆ ಕೋವಿಡ್ ಲಸಿಕೆ ಪಡೆದವರಿಗೆ ಕೆಲವು ಅವಕಾಶಗಳನ್ನು ಕಲ್ಪಿಸಲಾಗಿದೆ. ಶಾಲೆ-ಕಾಲೇಜು ವಿದ್ಯಾರ್ಥಿಗಳಿಗೆ ಆನ್ನೂ ಲೈನ್ ತರಗತಿ, ಚಿತ್ರಮಂದಿರಗಳು,ಬಾರ್, ರೆಸ್ಟೋರೆಂಟ್, ಕ್ರೀಡಾಂಗಣ ಸೇರಿದಂತೆ ಜನ ಜಮಾವಣೆಯಾಗುವ ಸ್ಥಳಗಳಿಗೆ ನಿರ್ಬಂಧ, ಶೇ.50 ರಷ್ಟು ಜನರಿಗೆ ಮಾತ್ರ ಅವಕಾಶ, ಪ್ರತಿಭಟನೆ, ಜಾತ್ರೆ ರ್ಯಾಲಿಗಳಿಗೆ ನಿರ್ಭಂಧ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಯ ಪ್ರಮುಖಾಂಶಗಳು ಇಲ್ಲಿವೆ.   
1.ಇಡೀ ರಾಜ್ಯದಲ್ಲಿ ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ಎಂದಿನಂತೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ.
2.ಎಲ್ಲಾ ಸರ್ಕಾರಿ ಕಚೇರಿಗಳು ಸೋಮವಾರದಿಂದ ಶುಕ್ರವಾರದವರೆಗೆ ವಾರದಲ್ಲಿ 5 ದಿನ ಮಾತ್ರ ಕಾರ್ಯನಿರ್ವಹಿಸುತ್ತವೆ.
3.ಸಚಿವಾಲಯದಲ್ಲಿ ಅಧೀನ ಕಾರ್ಯದರ್ಶಿ ಶ್ರೇಣಿಗಿಂತ ಕೆಳಗಿರುವ ಶೇ.50 ರಷ್ಟು ಸಿಬ್ಬಂದಿ ಮಾತ್ರ ಕಾರ್ಯನಿರ್ವಹಣೆ.
4.ರಾಜ್ಯಾದ್ಯಂತ ಶುಕ್ರವಾರ ರಾತ್ರಿ 10 ರಿಂದ ಸೋಮವಾರ ಬೆಳಿಗ್ಗೆ 5 ರವರೆಗೆ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರುತ್ತದೆ.

5.ವಾರಾಂತ್ಯದ ಕರ್ಫ್ಯೂ ಸಮಯದಲ್ಲಿ ತುರ್ತು ಉದ್ದೇಶಗಳಿಗಾಗಿ ಜನರ ಅಗತ್ಯಗಳನ್ನು ಪೂರೈಸಲು BMRCL ಸೇರಿದಂತೆ ಸಾರ್ವಜನಿಕ ಸಾರಿಗೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕರ ನಿರ್ದೇಶನದಂತೆ ಕಾರ್ಯನಿರ್ವಹಣೆ.
6.ಬೆಂಗಳೂರು ನಗರ ಜಿಲ್ಲೆಯಲ್ಲಿ, ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್ ಹಾಗೂ 10,11 ಮತ್ತು 12 ನೇ ತರಗತಿ ಹೊರತುಪಡಿಸಿ ಎಲ್ಲಾ ಶಾಲೆ-ಕಾಲೇಜುಗಳು ಜ.6 ರಿಂದ ಜಾರಿಗೆ ಬರುವಂತೆ ಆನ್ ಲೈನ್ ತರಗತಿಗಳಿಗೆ ಸೀಮಿತವಾಗಿರುತ್ತವೆ.
7.ಕೋವಿಡ್ ನಿಯಮಾವಳಿಗಳ ಕಟ್ಟುನಿಟ್ಟಿನ ಪಾಲನೆಯೊಂದಿಗೆ ಕೋವಿಡ್ ಲಸಿಕೆ ಪಡೆದವರಿಗೆ ಪಬ್‌/ಕ್ಲಬ್‌/ರೆಸ್ಟೋರೆಂಟ್‌/ಬಾರ್‌/ಹೋಟೆಲ್‌/ಹೋಟೆಲ್‌ಗಳಲ್ಲಿ ಅವುಗಳ ಆಸನ ಸಾಮರ್ಥ್ಯದ ಶೇ.50 ರಷ್ಟಕ್ಕೆ ಮಾತ್ರ ಅವಕಾಶ
8.ಕೋವಿಡ್ ನಿಯಮಾವಳಿಗಳ ಕಟ್ಟುನಿಟ್ಟಿನ ಪಾಲನೆ ಮತ್ತು ಲಸಿಕೆ ಪಡೆದವರಿಗೆ ಮಾತ್ರ ಸಿನಿಮಾ ಹಾಲ್‌/ಮಲ್ಟಿಪ್ಲೆಕ್ಸ್‌/ಥಿಯೇಟರ್‌/ರಂಗಮಂದಿರ/ಆಡಿಟೋರಿಯಂಗಳಲ್ಲಿ ಅವುಗಳ ಒಟ್ಟು ಆಸನ ಸಾಮರ್ಥ್ಯದ ಶೇ.50ರಷ್ಟು ಮಂದಿಗೆ ಅವಕಾಶ.
9.ಕೋವಿಡ್ ನಿಯಮಾವಳಿ ಪರಿಪಾಲಿಸುವ, ಲಸಿಕೆ ಪಡೆದವರಿಗೆ ತೆರೆದ ಸ್ಥಳಗಳಲ್ಲಿನ ಮದುವೆಗಳಿಗೆ 200 ಮತ್ತು ಮುಚ್ಚಿದ ಸ್ಥಳಗಳಲ್ಲಿ 100 ಜನರಿಗೆ ಮಾತ್ರ ಅನುಮತಿ.
10.ಧಾರ್ಮಿಕ ಸ್ಥಳಗಳ ದರ್ಶನ ಮತ್ತು ಪ್ರಾರ್ಥನೆಗೆ ಮಾತ್ರ ತೆರೆಯಲು ಅವಕಾಶ ನೀಡಲಾಗಿದೆ. ಯಾವುದೇ ಸೇವೆ ಇತ್ಯಾದಿಗಳನ್ನು ನಿರ್ಬಂಧಿಸಲಾಗಿದೆ.ಲಸಿಕೆ ಪಡೆದ 50 ಮಂದಿಗೆ ಮಾತ್ರ ಪ್ರವೇಶಾವಕಾಶ ಇರುತ್ತದೆ. 

11.ಮಾಲ್‌ಗಳು, ಶಾಪಿಂಗ್ ಕಾಂಪ್ಲೆಕ್ಸ್‌ಗಳು, ಅಂಗಡಿಗಳು ಮತ್ತು ಸಂಸ್ಥೆಗಳು ವಾರಂತ್ಯದ ಕರ್ಫ್ಯೂ ಹೊರತುಪಡಿಸಿ ಉಳಿದ ದಿನಗಳಲ್ಲಿ ಎಂದಿನಂತೆ ಕಾರ್ಯನಿರ್ವಹಿಸಬಹುದು.
12.ಲಸಿಕೆ ಪಡೆದವರು ಈಜುಕೊಳ ಮತ್ತು ಜಿಮ್‌ಗಳ ಒಟ್ಟು ಸಾಮರ್ಥ್ಯದ ಶೇ. 50 ಮಂದಿಗೆ ಅವಕಾಶ ಕಲ್ಪಿಸಲಾಗಿದೆ. 
13.ಕ್ರೀಡಾ ಸಮುಚ್ಚಯ ಮತ್ತು ಸ್ಟೇಡಿಯಂಗಳ ಒಟ್ಟು ಸಾಮರ್ಥ್ಯದ ಶೇ.50ರಷ್ಟು ಮಂದಿಗೆ ಅನುಮತಿ.
14.ರಾಜ್ಯಾದ್ಯಂತ ಎಲ್ಲಾ ರ್ಯಾಲಿಗಳು, ಧರಣಿಗಳು, ಪ್ರತಿಭಟನೆಗಳನ್ನು ನಿಷೇಧಿಸಲಾಗಿದೆ.
 15,ಕೋವಿಡ್ ಪ್ರಕರಣಗಳು ಹೆಚ್ಚಾಗಿರುವ ನೆರೆಯ ಕೇರಳ, ಮಹಾರಾಷ್ಟ್ರ ಮತ್ತು ಗೋವಾ ಗಡಿಗಳಲ್ಲಿ ತೀವ್ರ ನಿಗಾ ವಹಿಸಿ ವಾಯು, ರೈಲು, ರಸ್ತೆ ಹೀಗೆ ಎಲ್ಲಾ ಸಾರಿಗೆ ವಿಧಾನಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತದೆ ಎಂದು ನೂತನ ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ. ಇದನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ರಿತ್ಯ ಕ್ರಮ ಜರುಗಿಸಲಾಗುತ್ತದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಸರ್ಕಾರ ಮನವಿ ಮಾಡಿದೆ. 

Spread the love

Related Articles

Leave a Reply

Your email address will not be published. Required fields are marked *

Back to top button