Breaking NewsLatestವಿದೇಶಸುದ್ದಿ

ರಶ್ಯದ ವಿರುದ್ಧ ಮೇಲುಗೈ ಸಾಧಿಸುತ್ತೇವೆ: ಝೆಲೆನ್ಸ್ಕಿ

ಕೀವ್: ರಶ್ಯದ ಯಾವುದೇ ಆಕ್ರಮಣವನ್ನು ದೇಶ ಸಹಿಸಿಕೊಳ್ಳುತ್ತದೆ ಮತ್ತು ಅಂತಿಮವಾಗಿ ನಮ್ಮದೇ ಮೇಲುಗೈ ಆಗಲಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉಕ್ರೇನ್ನ `ಘನತೆ ಮತ್ತು ಸ್ವಾತಂತ್ರ್ಯದ’ ವಾರ್ಷಿಕ ದಿನಾಚರಣೆಯಲ್ಲಿ ಮಾತನಾಡಿದ ಅವರು, ರಶ್ಯದ ಆಕ್ರಮಣವನ್ನು ಎದುರಿಸಲು ಸಂಪೂರ್ಣ ಉಕ್ರೇನ್ ದೇಶವೇ ಒಗ್ಗೂಡಿ ನಿಂತಿದೆ.

ಯೋಧರು ರಣರಂಗದಲ್ಲಿ ಶತ್ರುಗಳನ್ನು ಎದುರಿಸುತ್ತಿದ್ದರೆ, ತರಗತಿಗೆ ಹಾಜರಾಗಲು ಸಾಧ್ಯವಾಗದಿದ್ದರೂ ಶಿಕ್ಷಕರು ಆನ್ಲೈನ್ ಮೂಲಕ ತಮ್ಮ ಕರ್ತವ್ಯ ಮುಂದುವರಿಸಿದ್ದಾರೆ.

ಟೈಲರ್ಗಳು ಸೈನಿಕರಿಗೆ ಅಗತ್ಯವಿರುವ ಸಮವಸ್ತ್ರಗಳನ್ನು ಒದಗಿಸುತ್ತಿದ್ದಾರೆ. ಗ್ರಾಮೀಣ ಭಾಗದ ಜನರು ಯೋಧರಿಗಾಗಿ ಆಹಾರ ತಯಾರಿಸಿ ಕಳುಹಿಸುತ್ತಿದ್ದಾರೆ. ಅಪಾಯವನ್ನು ಲೆಕ್ಕಿಸದೆ ರೈತರು ತಮ್ಮ ಕಾಯಕ ಮುಂದುವರಿಸಿದ್ದಾರೆ. ಶತ್ರುಗಳ ನಿರಂತರ ಕ್ಷಿಪಣಿ, ಫಿರಂಗಿ, ಬಾಂಬ್ ದಾಳಿಗೆ ಎದೆಯೊಡ್ಡಿ, ಅವರ ಕಿರುಕುಳ, ದೌರ್ಜನ್ಯಕ್ಕೆ ಅಂಜದೆ ಎಲ್ಲಾ ಕ್ಷೇತ್ರದ ಜನತೆ ತಮ್ಮ ಕಾಯಕ ಮುಂದುವರಿಸುತ್ತಿರುವುದರಿಂದ ಈ ಹೋರಾಟದಲ್ಲಿ ಉಕ್ರೇನ್ ಗೆಲುವು ನಿಶ್ಚಿತ ಎಂದು ಝೆಲೆನ್ಸ್ಕಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಣವಿಲ್ಲದಿದ್ದರೂ ಬದುಕಬಹುದು, ಗ್ಯಾಸೊಲಿನ್, ಬಿಸಿನೀರು, ವಿದ್ಯುತ್ ಇಲ್ಲದೆ ಬದುಕಬಹುದು. ಆದರೆ ಸ್ವಾತಂತ್ರ್ಯವಿಲ್ಲದೆ ಬ ದುಕಿಲ್ಲ ಎಂದವರು ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಒತ್ತಿ ಹೇಳಿದ್ದಾರೆ. ಯುರೋಪಿಯನ್ ಯೂನಿಯನ್ಗೆ ಸೇರ್ಪಡೆಯಾಗಬೇಕೆಂದು ಆಗ್ರಹಿಸಿ ಉಕ್ರೇನ್ನಲ್ಲಿ 2013/14ರಲ್ಲಿ ನಡೆದಿದ್ದ ಪ್ರತಿಭಟನೆಯನ್ನು `ಘನತೆ ಮತ್ತು ಸ್ವಾತಂತ್ರ್ಯದ ದಿನ’ ವೆಂದು ಪ್ರತೀ ವರ್ಷ ಆಚರಿಸಲಾಗುತ್ತದೆ.

Spread the love

Related Articles

Leave a Reply

Your email address will not be published. Required fields are marked *

Back to top button