ಹಿರಿಯ ನಟಿ, ರಂಗಕರ್ಮಿ ಮಂಜು ಭಾರ್ಗವಿ ನಾರಾಯಣ ಇನ್ನಿಲ್ಲ

ಬೆಂಗಳೂರು: ಹಿರಿಯ ನಟಿ ಮಂಜುಭಾರ್ಗವಿ ನಾರಾಯಣ ಸೋಮವಾರ ಸಂಜೆ ನಿಧನರಾಗಿದ್ದಾರೆ ಅವರಿ 84 ವರ್ಷ ವಯಸ್ಸಾಗಿತ್ತು. ಚಲನಚಿತ್ರ, ಕಿರುತೆರೆ, ರಂಗಭೂಮಿಯಲ್ಲಿ ಅವರು ತಮ್ಮನ್ನು ಗುರುತಿಸಿಕೊಂಡಿದ್ದರು. ತಮ್ಮ ಸಹಜ ಅಭಿನಯದಿಂದ ಎಲ್ಲರ ಗಮನ ಸೆಳೆದಿದ್ದರು.
ಹಂತಕರ ಸಂಚು, ಪಲ್ಲವಿ ಅನುಪಲ್ಲವಿ, ವಂಶವೃಕ್ಷ, ಪ್ರೊಫೆಸರ್ ಹುಚ್ಚರಾಯ, ಬಾ ನಲ್ಲೆ ಮಧುಚಂದ್ರಕೆ, ಎರಡು ಕನಸು ಮತ್ತಿತರ ಚಲನಚಿತ್ರಗಳಲ್ಲಿ ಅವರು ನಟಿಸಿದ್ದರು. ಸರಿಸುಮಾರು 600ಕ್ಕೂ ಹೆಚ್ಚು ನಾಟಕಗಳಲ್ಲಿ ಅವರು ಅಭಿನಯಿಸಿದ್ದರು. ಸಹಜ ಅಭಿನಯ ಅವರಿಗೆ ವರದಾನವಾಗಿತ್ತು.
ಮೇಕಪ್ ನಾಣಿ ಎಂದು ಖ್ಯಾತರಾಗಿದ್ದ ಬೆಳವಾಡಿ ನಂಜುಂಡಯ್ಯ ನಾರಾಯಣರನ್ನು ವಿವಾಹವಾಗಿದ್ದ, ಮೃತರಿಗೆ ಹಿರಿಯ ರಂಗಕರ್ಮಿ ಹಾಗೂ ನಟರಾದ ಪ್ರಕಾಶ ಬೆಳವಾಡಿ, ಸುಧಾ ಬೆಳವಾಡಿ ಸೇರಿದಂತೆ ನಾಲ್ವರು ಮಕ್ಕಳಿದ್ದಾರೆ. ಮಂಜು ಭಾರ್ಗವಿ ಅವರು 2019ರಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು.
ಮಂಜುಭಾರ್ಗವಿ ಅವರ ನಿಧನ ವಾರ್ತೆಯನ್ನು ಅವರ ಮೊಮ್ಮಗಳು ಸಂಯುಕ್ತಾ ಹೊರನಾಡು ಸಾಮಾಜಿಕ ಮಾಧ್ಯಮಗಳ ಮೂಲಕ ಖಚಿತಪಡಿಸಿದ್ದಾರೆ.
