Breaking NewsLatestಸುದ್ದಿ

ಹಿರಿಯ ನಟ ವಿಕ್ರಮ್‌ ಗೋಖಲೆ ನಿಧನ

ಮುಂಬೈ: ಹಿಂದಿ, ಮರಾಠಿ ಭಾಷೆಗಳ ಹಲವಾರು ಚಿತ್ರಗಳು, ಧಾರಾವಾಹಿಗಳು ಮತ್ತು ನಾಟಕಗಳಲ್ಲಿ ಅಭಿನಯಿಸಿದ್ದ ಹಿರಿಯ ನಟ ವಿಕ್ರಮ್‌ ಗೋಖಲೆ(77) ಅವರು ಶನಿವಾರ ಪುಣೆಯಲ್ಲಿ ನಿಧನರಾದರು.

ಅನಾರೋಗ್ಯಕ್ಕೀಡಾಗಿದ್ದ ಗೋಖಲೆ ಅವರನ್ನು ಪುಣೆಯ ದೀನನಾಥ ಮಂಗೇಶ್ಕರ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದರು. ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಅವರು ಅಗಲಿದ್ದಾರೆ.

ಗೋಖಲೆ ಕಲಾವಿದರ ಕುಟುಂಬದಿಂದ ಬಂದವರು. ಅವರಮುತ್ತಜ್ಜಿ ದುರ್ಗಾಬಾಯಿ ಕಾಮತ್‌ ಭಾರತೀಯ ಚಿತ್ರರಂಗದ ಮೊದಲ ನಟಿ, ಅಜ್ಜಿ ಕಮಲಾಬಾಯಿ ಕಾಮತ್‌ ಮೊದಲ ಬಾಲ ಕಲಾವಿದರು.

ಗೋಖಲೆ ಅವರು ‘ಅಗ್ನಿಪಥ್’, ‘ಹಮ್‌ ದಿಲ್‌ ದೆ ಚುಕೆ ಸನಮ್‌’, ‘ಮಿಷನ್‌ ಮಂಗಲ್‌’ ಮುಂತಾದ ಪ್ರಮುಖ ಚಿತ್ರಗಳಲ್ಲಿ ನಟಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button