Breaking NewsLatestರಾಷ್ಟ್ರೀಯ

ಲಸಿಕೆ ಅಭಿಯಾನ: 100 ಕೋಟಿ ಡೋಸ್ ಪೂರ್ಣಗೊಳಿಸಿದ ಭಾರತ

ನವದೆಹಲಿ: ಕೋವಿಡ್ ಲಸಿಕೆ ಅಭಿಯಾನದಲ್ಲಿ ಭಾರತ ಇಂದಿಗೆ 100 ಕೋಟಿ ಡೋಸ್ ಪೂರ್ಣಗೊಳಿಸಿರುವುದಾಗಿ ಸರ್ಕಾರ ಪ್ರಕಟಿಸಿದೆ.

ಲಸಿಕೆ ಅಭಿಯಾನ ಶುರುವಾಗಿ 9 ತಿಂಗಳ ಬಳಿಕ ಈ ಗುರಿ ಮುಟ್ಟಿರುವುದಾಗಿ ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಹೇಳಿದ್ದಾರೆ. ಅಭಿನಂದನೆಗಳು ಭಾರತ ಎಂದು ಟ್ವೀಟ್ ಮಾಡಿರುವ ಅವರು, ಜನತೆ ಮತ್ತು ಆರೋಗ್ಯ ಕಾರ್ಯಕರ್ತರನ್ನು ಅಭಿನಂದಿಸಿದ್ದಾರೆ.

ಸರ್ಕಾರದ ಪ್ರಕಾರ ಈಗಾಗಲೇ ಶೇ. 30ರಷ್ಟು ಮಂದಿ ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ.

100 ಕೋಟಿ ಡೋಸ್ ಪೂರ್ಣಗೊಳಿಸಿರುವ ಸಂದರ್ಭದಲ್ಲಿ ಸಚಿವ ಮಾಂಡವೀಯ ಅವರು,ಗಾಯಕ ಕೈಲಾಶ್ ಖೇರ್ ಹಾಡಿದ ಹಾಡು ಮತ್ತು ಕಿರುಚಿತ್ರವೊಂದನ್ನು ಬಿಡುಗಡೆ ಮಾಡಲಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button