Breaking NewsLatestರಾಜ್ಯರಾಷ್ಟ್ರೀಯವಿದೇಶಸುದ್ದಿ

ಭಾರತೀಯ ಮೂಲದ ತೈಲ ಕಂಪನಿ ಮೇಲೆ ಅಮೆರಿಕ ನಿರ್ಬಂಧ!

ಇರಾನ್‌ನಿಂದ ತೈಲ ಖರೀದಿ ಮಾಡ್ತಿದ್ದ ಭಾರತೀಯ ಮೂಲದ ಕಂಪನಿ ಒಂದರ ಮೇಲೆ ಅಮೆರಿಕ ನಿರ್ಬಂಧ ಹೇರಿದೆ. UAE ಹಾಗೂ ಹಾಂಗ್‌ ಕಾಂಗ್‌ನ ಕೆಲ ತೈಲ ಕಂಪನಿಗಳ ಜೊತೆಗೆ ಭಾರತೀಯ ಪೆಟ್ರೋಕೆಮಿಕಲ್‌ ಕಂಪನಿಯಾದ ತಿಬಾಲಾಜಿ ಪೆಟ್ರೊಕೆಮ್‌ ಪ್ರೈವೇಟ್‌ ಲಿಮಟೆಡ್‌ ಮೇಲೆಯೂ ಅಮೆರಿಕ ನಿರ್ಬಂಧ ಹೇರಿದೆ.

ದಕ್ಷಿಣ ಹಾಗೂ ಪೂರ್ವ ಏಷ್ಯಾದಲ್ಲಿ ಇರಾನ್‌ನ ತೈಲ ಬಳಕೆದಾರರನ್ನ ಕಡಿಮೆ ಮಾಡೋಕೆ ಈ ರೀತಿ ನಿರ್ಬಂಧ ಹೇರಲಾಗಿದೆ ಅಂತ ಅಮೆರಿಕದ ಟ್ರೆಶರಿ ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಅಂದ್ಹಾಗೆ ಈ ತಿಬಾಲಾಜಿ ಕಂಪನಿ ಇರಾನ್‌ನ ತೈಲ ಕಂಪನಿಯಿಂದ ಲಕ್ಷಗಟ್ಟಲೇ ಡಾಲರ್‌ನ ಮೆಥನಾಲ್‌, ತೈಲ ಸೇರಿದಂತೆ ಇತರ ಪೆಟ್ರೋಕೆಮಿಕಲ್‌ ಉತ್ಪನ್ನಗಳ ಖರೀದಿ ಮಾಡ್ತಿತ್ತು ಅಂತ ಅಮೆರಿಕ ಹೇಳಿದೆ. ಇದಕ್ಕೆ ಸಂಬಂಧಪಟ್ಟಂತೆ ಭಾರತದ ಅಧಿಕಾರಿಗಳಿಂದ ಈ ಬಗ್ಗೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

Spread the love

Related Articles

Leave a Reply

Your email address will not be published. Required fields are marked *

Back to top button