ಹುಡುಗಿ ವೇಷದಲ್ಲಿ ರಿಯಲ್ ಸ್ಟಾರ್: ಕುತೂಹಲ ಮೂಡಿಸಿದ ಉಪ್ಪಿ ಗೆಟಪ್

ಕಲಾವಿದರ ತಮ್ಮ ಸಿನಿಮಾದ ಪಾತ್ರಕ್ಕಾಗಿ ಈಗಾಗ್ಲೆ ಹುಡುಗಿ ವೇಷದಲ್ಲಿ ಕಾಣಿಸಿಕೊಂಡಿದ್ದು ನೋಡಿದ್ದೀರಾ. ಇದೀಗ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಮುಂದಿನ ಸಿನಿಮಾ ಹೋಮ್ ಮಿನಿಸ್ಟರ್ ಗೆ ಹುಡುಗಿಯ ಗೆಟಪ್ ನಲ್ಲಿ ಕಾಣಿಸಿಕೊಂಡು ಕುತೂಹಲ ಮೂಡಿಸಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾಗಳಲ್ಲಿ ಏನಾದರೊಂದು ಹೊಸತನ ಇರುತ್ತದೆ. ಅದರಂತೆ ಹೋಮ್ ಮಿನಿಸ್ಟರ್ ಸಿನಿಮಾ ಕೂಡಾ ಉಪೇಂದ್ರರ ಹೊಸ ಗೆಟಪ್ ಕಾರಣದಿಂದಾಗಿ ಕುತೂಹಲ ಕೆರಳಿಸುತ್ತಿದೆ. ಉಪೇಂದ್ರ ಲೇಡಿ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದು, ಅದರ ಫೋಟೋವನ್ನು ಉಪೇಂದ್ರ ಸಾಮಾಜಿಕ ಜಾಲತಾಣದ ಪ್ರೊಫೈಲ್ ಪಿಕ್ ಆಗಿ ಬಳಸಿಕೊಂಡಿದ್ದಾರೆ.
ಅಂದಹಾಗೆ ‘ಹೋಮ್ ಮಿನಿಸ್ಟರ್’ ಸಿನಿಮಾ ಇದೇ ಏಪ್ರಿಲ್ 1ರಂದು ತೆರೆಗೆ ಬರುತ್ತಿದೆ. ಎರಡು ವರ್ಷಗಳ ಹಿಂದೆಯೇ ಆ್ಯಕ್ಷನ್ ಥ್ರಿಲ್ಲರ್ ಕಥಾಹಂದರದ ‘ಹೋಮ್ ಮಿನಿಸ್ಟರ್’ ಸೆಟ್ಟೇರಿತ್ತು. ಇದೀಗ ಸಿನಿಮಾ ರಿಲೀಸ್ ಆಗುತ್ತಿದ್ದು, ಉಪೇಂದ್ರ ಹೊಸ ಗೆಟಪ್ ಕಾರಣದಿಂದ ಕುತೂಹಲ ಮೂಡಿಸುತ್ತಿದೆ.
ಸುಜಯ್ ಕೆ. ಶ್ರೀಹರಿ ನಿರ್ದೇಶಿಸಿರುವ ಈ ಚಿತ್ರದ ನಾಯಕಿಯಾಗಿ ವೇದಿಕ ನಟಿಸಿದ್ದು, ತಾನ್ಯ ಹೋಪ್, ಚಾಂದಿನಿ, ಸುಮನ್ ರಂಗನಾಥ್, ಸಾಧುಕೋಕಿಲ, ಶ್ರೀನಿವಾಸ ಮೂರ್ತಿ, ಸುಧಾ ಬೆಳವಾಡಿ, ತಿಲಕ್, ಅವಿನಾಶ್, ಮಾಳವಿಕ ಅವಿನಾಶ್, ಲಾಸ್ಯ ಮುಂತಾದವರು ತಾರಾಬಳಗದಲ್ಲಿದ್ದಾರೆ.
