Breaking NewsLatestಮನರಂಜನೆಸ್ಯಾಂಡಲ್ ವುಡ್
ಮತ್ತೆ ಡೈರಕ್ಷನ್ ಕ್ಯಾಪ್ ತೊಟ್ಟ ಉಪೇಂದ್ರ; ಭಾರಿ ಸಂಚಲನ ಮೂಡಿಸಿದ ಚಿತ್ರದ ಪೋಸ್ಟರ್

ರಿಯಲ್ ಸ್ಟಾರ್ ಉಪೇಂದ್ರ ಅವರು ಮತ್ತೆ ಸಿನಿಮಾ ಡೈರೆಕ್ಷನ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಆದೆಲ್ಲ ಗೊಂದಲಕ್ಕೆ ಉಪೇಂದ್ರ ಅವರು ತೆರೆ ಎಳೆದಿದ್ದಾರೆ. ಅವರು ನಿರ್ದೇಶನ ಮಾಡುತ್ತಿರುವ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ಜೊತೆಗೆ ಅವರ ಫಸ್ಟ್ ಲುಕ್ ರಿಲೀಸ್ ಮಾಡಿದ್ದು, ಭಾರಿ ನಿರೀಕ್ಷೆ ಮೂಡಿಸಿದೆ. ಈ ಚಿತ್ರಕ್ಕೆ ವಿಭಿನ್ನವಾದ ಟೈಟಲ್ ಇಟ್ಟಿದ್ದಾರೆ. ಅದನ್ನು ಕುದುರೆ ಲಾಳ ಎನ್ನಬೇಕೋ, ಮೂರು ನಾಮ ಎನ್ನಬೇಕೋ, ಉಗುರಿನ ಮೇಲೆ ಮತದಾನದ ಇಂಕು ಹತ್ತಿರುವ ಗುರುತು ಎನ್ನಬೇಕೋ ಎಂಬುದು ತಿಳಿದಿಲ್ಲ. ಇದೀಗ ಅನಾವರಣವಾಗಿದ್ದ ಪೋಸ್ಟರ್ ಎಲ್ಲರ ಗಮನ ಸೆಳೆಯುತ್ತಿದೆ. ಕೊಂಬು ಇರುವ ಕುದುರೆಯನ್ನು ಏರಿ ಉಪೇಂದ್ರ ಬಂದಿದ್ದಾರೆ .ಈ ಪೋಸ್ಟರ್ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
