Breaking NewsLatestರಾಷ್ಟ್ರೀಯವಿದೇಶಸುದ್ದಿ

ರಷ್ಯಾ-ಉಕ್ರೀನ್ ನಡುವೆ ಹೆಚ್ಚಿದ ಉದ್ವಿಗ್ನತೆ: ಅಮೆರಿಕಾ ಎಚ್ಚರಿಕೆ

ಮ್ಯೂನಿಚ್: ರಷ್ಯಾ ಮತ್ತು ಉಕ್ರೇನ್ ನಡುವೆ ಉದ್ವಿಗ್ನತೆ ಹೆಚ್ಚುತ್ತಿದೆ.  ಈ ನಡುವೆ, ರಷ್ಯಾದಿಂದ ಉಕ್ರೇನ್ ಮೇಲೆ ಆಕ್ರಮಣ ನಡೆದಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಮಿತ್ರ ಮತ್ತು ಪಾಲುದಾರ ರಾಷ್ಟ್ರಗಳು ರಷ್ಯಾ ಆಕ್ರಮಣವನ್ನು ಎದುರಿಸಲು ಶಕ್ತವಾಗಿವೆ ಎಂದು ಎಚ್ಚರಿಸಿದ್ದಾರೆ.

ಇದಕ್ಕೆ ನಮ್ಮ ಬದ್ಧತೆ ಪುನರುಚ್ಚರಿಸಲು ನಾವು ಮ್ಯೂನಿಚ್ ನಲ್ಲಿ ಒಟ್ಟುಗೂಡಿದ್ದೇವೆ. ಇವು ನಮಗೆ ಶಾಂತಿ ಮತ್ತು ಭದ್ರತೆ ತಂದಿವೆ. ಇದರ ಬೆನ್ನೆಲುಬು ನ್ಯಾಟೋ ಆಗಿದ್ದು, ವಿಶ್ವ ಕಂಡ ಶ್ರೇಷ್ಠ ಮಿಲಿಟರಿ ಮೈತ್ರಿ ಇದಾಗಿದೆ ಎಂದಿದ್ದಾರೆ.

ರಷ್ಯಾ ವರ್ತನೆ ಹಿನ್ನೆಲೆಯಲ್ಲಿ ಅಮೆರಿಕಾ, ಉಕ್ರೇನ್ ಜತೆ ನಿಂತಿದೆ. ನಾವು ಉಕ್ರೇನ್ ನ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಬದ್ಧರಾಗಿದ್ದೇವೆ ಎಂದು ಹೇಳಿದರು.

ನಮ್ಮ ಮಿತ್ರ ಮತ್ತು ಪಾಲುದಾರ ರಾಷ್ಟ್ರಗಳು ಗಮನಾರ್ಹ ಏಕತೆ ಸಾಧಿಸಿವೆ. ಬೆದರಿಕೆ ವಿರುದ್ಧ ನಮ್ಮ ಒಗ್ಗಟ್ಟಿನ ಪ್ರತಿಕ್ರಿಯೆ ಮತ್ತು ಅಂತಾರಾಷ್ಟ್ರೀಯ ನಿಯಮಗಳು ಮತ್ತು ಮಾನದಂಡ ಎತ್ತಿ ಹಿಡಿಯುವ ನಮ್ಮ ನಿರ್ಣಯದಲ್ಲಿ ಇದು ಸ್ಪಷ್ಟವಾಗಿದೆ ಎಂದೂ ಕಮಲಾ ಹ್ಯಾರಿಸಿ ಹೇಳಿದ್ದಾರೆ.

ಒಂದು ವೇಳೆ, ಉಕ್ರೇನನ್ನು ಇನ್ನಷ್ಟು ಆಕ್ರಮಿಸಿದರೆ ಅಮೆರಿಕಾದ ಮಿತ್ರ ಮತ್ತು ಪಾಲುದಾರ ರಾಷ್ಟ್ರಗಳು ವಿಧಿಸುವ ಆರ್ಥಿಕ ವೆಚ್ಚವನ್ನು ರಷ್ಯಾ ಭರಿಸಬೇಕಾಗುತ್ತದೆ ಎಂದೂ ಎಚ್ಚರಿಸಿದ್ದಾರೆ.

ಉಕ್ರೀನ್ ವಿರುದ್ಧ ರಷ್ಯಾ ಕಳೆದ 8 ವರ್ಷಗಳಿಂದ ತನ್ನ ಪ್ರಾಕ್ಷಿ ಯುದ್ಧ ಆರಂಭಿಸಿದಂದಿನಿಂದ ಉಕ್ರೀನ್ ನ ಸರಿ ಸುಮಾರು 14 ಸಾವಿರ ಮಂದಿ ಕೊಲ್ಲಲ್ಪಟ್ಟಿದ್ದಾರೆ. ಒಂದು ಮಿಲಿಯನ್ ಗಿಂತಲೂ ಹೆಚ್ಚು ಜನ ಬೇರೆಡೆ ಸ್ಥಳಾಂತರವಾಗಿದ್ದು, 3 ಮಿಲಿಯನ್ ಗೂ ಅಧಿಕ ಜನ ನೆರವಿನ ಅಗತ್ಯವಿದೆ.

Spread the love

Related Articles

Leave a Reply

Your email address will not be published. Required fields are marked *

Back to top button