Breaking Newsರಾಷ್ಟ್ರೀಯ
ಕಾಶ್ಮೀರ; ಎನ್ಕೌಂಟರ್ಗೆ ಇಬ್ಬರು ಭಯೋತ್ಪಾದಕರು ಬಲಿ

ಶ್ರೀನಗರ: ಕಾಶ್ಮೀರದಲ್ಲಿ ಶೋಪಿಯಾನ್ ಜಿಲ್ಲೆಯ ಡ್ರಾಗಡ್ ಎಂಬಲ್ಲಿ ಬುಧವಾರ ನಡೆಸಿರುವ ಎನ್ಕೌಂಟರ್ ನಲ್ಲಿ ಇಬ್ಬರು ಭಯೋತ್ಪಾದಕರು ಸತ್ತಿದ್ದಾರೆ.
ಇಬ್ಬರೂ ಎಲ್ಇಟಿ ಭಯೋತ್ಪಾದಕರೆಂದು ತಿಳಿಯಲಾಗಿದೆ. ಮೂವರು ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಓರ್ವ ಭಯೋತ್ಪಾದಕನನ್ನು ಆದಿಲ್ ವಾನಿ ಎಂದು ಗುರುತಿಸಲಾಗಿದ್ದು ಈತ ಮೂರು ದಿನಗಳ ಹಿಂದಷ್ಟೇ ಉತ್ತರ ಪ್ರದೇಶದ ಸಹರಾನ್ ಪುರದ ಬಡಗಿಯೊಬ್ಬನ ಹತ್ಯೆಯಲ್ಲಿ ಭಾಗಿಯಾಗಿದ್ದ ಎಂದು ಕಾಶ್ಮೀರ ವಲಯದ ಐಜಿಪಿ ವಿಜಯ್ಕುಮಾರ್ ಮಾಹಿತಿ ನೀಡಿದ್ದಾರೆ.
