Breaking NewsLatestವಿದೇಶಸುದ್ದಿ

ಟ್ರಂಪ್‌ ಟ್ವಿಟರ್‌ ಖಾತೆ ಮೇಲಿನ ನಿಷೇಧ ತೆರವು

ವಾಷಿಂಗ್ಟನ್‌: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಟ್ವಿಟರ್‌ ಖಾತೆ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಟ್ವಿಟರ್‌ ಹಿಂಪಡೆದಿದೆ.

ಟ್ವಿಟರ್‌ ಸಮೀಕ್ಷೆಯಲ್ಲಿ ಕಡಿಮೆ ಅಂತರದಲ್ಲಿ ಟ್ರಂಪ್‌ ಪರ ಮತಗಳು ಬಂದಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಟ್ವಿಟರ್‌ ಮುಂದಾಗಿದೆ.

“ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಟ್ವಿಟರ್‌ ಖಾತೆಯನ್ನು ಮರು ಸ್ಥಾಪಿಸಬೇಕೆ?. ಈ ಪ್ರಶ್ನೆಗೆ ಹೌದು ಅಥವಾ ಇಲ್ಲ ಎಂದು ಪ್ರತಿಕ್ರಿಯಿಸಿ’ ಎಂದು ಎಲಾನ್‌ ಮಸ್ಕ್ ಶನಿವಾರ ಸಮೀಕ್ಷೆ ಆರಂಭಿಸಿದ್ದರು. ಈ ಸಮೀಕ್ಷೆಯಲ್ಲಿ 15 ಮಿಲಿಯನ್‌ ಜನರು ಪಾಲ್ಗೊಂಡಿ ದ್ದರು. ಈ ಪೈಕಿ ಹೌದು ಎಂದು ಶೇ. 51.8 ರಷ್ಟು ಜನರು ಹಾಗೂ ಇಲ್ಲ ಎಂದು ಶೇ. 48.2ರಷ್ಟು ಜನರು ಮತ ಹಾಕಿದ್ದರು.

ಮತ್ತಷ್ಟು ಉದ್ಯೋಗಿಗಳ ವಜಾ: ಟ್ವಿಟರ್‌ನ ಮಾರ್ಕೆಟಿಂಗ್‌ ವಿಭಾಗದಿಂದ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲು ಮಾಲೀಕ ಎಲಾನ್‌ ಮಸ್ಕ್ ಮುಂದಾಗಿದ್ದಾರೆ. ಈ ಬಗ್ಗೆ ಸೋಮವಾರ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ. ಇದೇ ವೇಳೆ, ಟ್ವಿಟರ್‌, ಮೆಟಾ ಅನಂತರ ಇದೀಗ ಜೊಮೆಟೊ ತನ್ನ 3,800 ಉದ್ಯೋಗಿಗಳ ಪೈಕಿ 3,800 ಶೇ.3 ಮಂದಿಯನ್ನು ತೆಗೆದು ಹಾಕಲು ಮುಂದಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button