Lucknow; ಮಹಿಳಾ ಕಾನ್ಸ್ಟೇಬಲ್ ಶವ ಪತ್ತೆ ಪ್ರಕರಣ : ತಹಶೀಲ್ದಾರ್ ಸೇರಿ ಮೂವರ ಬಂಧನ

ಲಖನೌ : ಮಹಿಳಾ ಕಾನ್ಸ್ಟೇಬಲ್ ಒಬ್ಬರ ಶವ ಚರಂಡಿಯಲ್ಲಿ ಪತ್ತೆಯಾಗಿ ಜನರನ್ನು ಬೆಚ್ಚಿಬೀಳಿಸಿದೆ. ಲಖನೌದಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ತಹಶೀಲ್ದಾರ್, ಅವರ ಪತ್ನಿ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಪೋಲೀಸರು ಪ್ರಕಾರ, ಪದ್ಮೇಶ್ 5 ವರ್ಷಗಳ ಹಿಂದೆ ಮೃತ ಕಾನ್ಸ್ಟೇಬಲ್ ರುಚಿ ಸಿಂಗ್ ಅವರೊಂದಿಗೆ ಫೆಸ್ಬುಕ್ನಲ್ಲಿ ಸ್ನೇಹ ಬೆಳೆಸಿದ್ದರು. ತಹಶೀಲ್ದಾರ್ ಪದ್ಮಶ್ ಶ್ರೀವಾಸ್ತವ್ ವಿವಾಹದ ಬಳಿಉಕ ರುಚಿ ಸಿಂಗ್ ಜೊತೆ ಸಂಬಂಧ ಹೊಂದಿದ್ದರು.
ಈ ನಡುವೆ ಪದ್ಮಶ್ ತನ್ನ ಪತ್ನಿಗೆ ವಿಚ್ಚೇಧನ ನೀಡಿ, ತನನ್ನು ವಿವಾಹಗುವಂತೆ ಒತ್ತಡ ಹೇರುತ್ತಿದ್ದಳು. ರುಚಿ ಸಿಂಗ್ ಕೊನೆಯ ಕರೆ ತಹಶೀಲ್ದಾರ್ ಪದ್ಮೇಶ್ ಮಾಡಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆ ವಿಚಾರಣೆ ನಡೆಸಿದಾಗ ಕೊಲೆ ಮಾಡಿ ಚರಂಡಿಗೆ ಎಸೆದಿರುವುದಾಗಿ ತಪ್ಪು ಮಾಡಿರುವುದಾಗಿ ಒಪ್ಪಿಗೊಂಡಿದ್ದಾರೆ ಎಂದು ಪೂರ್ವ ವಲಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಮಹಿಳಾ ಕಾನ್ಸ್ಟೇಬಲ್ ಹತ್ಯೆ ಪ್ರಕರಣದಲ್ಲಿ ತಹಶೀಲ್ದಾರ್ ಪದ್ಮೇಶ್ ಹಾಗೂ ಅವರ ಪತ್ನಿ ಪ್ರಗತಿ ಶ್ರೀವಾಸ್ತವ್ ಮತ್ತು ಇನ್ನೊರ್ವನನ್ನು ಪೊಲೀಸರು ಬಂಧಿಸಿದ್ದಾರೆ.
