Breaking NewsLatestಜ್ಯೋತಿಷ್ಯಪರಿಹಾರಗಳು
ದೃಷ್ಟಿ ದೋಷ ಸಮಸ್ಯೆ ಇದ್ದವರು ಈ ರೀತಿ ಮಾಡಿದ್ರೆ ಪರಿಹಾರ ಶತಸಿದ್ದ

ಮನುಷ್ಯನ ದೇಹದ ಸೂಕ್ಷ್ಮ ಅಂಗಾಗಗಳಲ್ಲಿ ಕಣ್ಣು ಕೂಡ ಒಂದು. ಇದಕ್ಕೆ ಎಷ್ಟು ಕೇರ್ ಮಾಡಿದ್ರೂ ಸಾಕಾಗುವುದಿಲ್ಲ.ಆದರೆ ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್, ಮೊಬೈಲ್ ಬಳಕೆಯಿಂದ ಕಣ್ಣುಗಳು ಹೆಚ್ಚು ಆಯಾಸಗೊಳ್ಳುತ್ತವೆ. ಕಣ್ಣಿನ ಅತಿಯಾದ ಶ್ರಮ ಒಂದಲ್ಲ ಒಂದು ಸಮಸ್ಯೆಗೆ ಕಾರಣವಾಗುತ್ತದೆ. ಚಿಕ್ಕವಯಸ್ಸಿನಲ್ಲೇ ಕಣ್ಣಿನ ದೋಷ ಕಾಣಿಸಿಕೊಳ್ಳುತ್ತದೆ. ಇದರ ನಿವಾರಣೆಗೆ ಕೆಲವರು ಆ ಜ್ಯೂಸ್ ಈ ಜ್ಯೂಸ್ ಮೊರೆ ಹೋಗುತ್ತಾರೆ.ಆದರೆ ಇಲ್ಲಿದೆ ಕೆಲ ನೇತ್ರ ದೋಷ ಶಮನಕ್ಕೆ ಪರಿಹಾರಗಳು.
- ನೇತ್ರಗಳಲ್ಲಿ ಯಾವುದೇ ಪ್ರಕಾರದ ದೋಷವಿದ್ದರೂ ಸೂರ್ಯ ಭಗವಂತನ ಆರಾಧನೆ ಮಾಡಬೇಕು.
- ಕಣ್ಣು ರೆಪ್ಪೆಯ ಮೇಲೆ ಕಣ್ಣು ಜುಟ್ಟಲಿಯಾಗಿದ್ದರೆ ಲಟ್ಟಣಿಗೆಯಿಂದ ಅದನ್ನು ಏಳು ಬಾರಿ ಸ್ಪರ್ಶಿಸುವುದರಿಂದ ಗುಣವಾಗುತ್ತದೆ.
- ಶಂಖದಲ್ಲಿ ನೀರು ತುಂಬಿ, ಆ ನೀರಿನಿಂದ ಕಣ್ಣು ತೊಳೆದರೆ ಕಣ್ಣಿನ ರೋಗ ದೂರವಾಗುತ್ತದೆ
- ಬಲಗಣ್ಣಿನಲ್ಲಿ ಪೀಡೆಯಿದ್ದರೆ, ಎಡಗಾಲಿನ ಹೆಬ್ಬೆರಳಿನ ಮೇಲೆ ಎಕ್ಕದ ಗಿಡದ ಹಾಲನ್ನು ಲೇಪಿಸಿ
- ಓಂ ಶಂ ಶಂಖನೀಭ್ಯಾಂ ನಮ: ಈ ಮಂತ್ರದ ಜಪದಿಂದ ನೇತ್ರ ದೋಷದ ತೊಂದರೆಗಳು ದೂರವಾಗುತ್ತದೆ.
