Breaking NewsLatestಜಿಲ್ಲಾ ಸುದ್ದಿದಾವಣಗೆರೆರಾಜ್ಯಸುದ್ದಿ

ಗುತ್ತಿಗೆದಾರ ಸಂತೋಷ ಪಾಟೀಲ್ ಬಗ್ಗೆ ಬಹಳ ವಿಚಾರಗಳಿವೆ: ಗೋವಿಂದ ಕಾರಜೋಳ

ದಾವಣಗೆರೆ: ಕೆ. ಎಸ್ ಈಶ್ವರಪ್ಪ ಅವರ ರಾಜೀನಾಮೆಗೆ ಕಾರಣರಾದ ಗುತ್ತಿಗೆದಾರ ಸಂತೋಷ ಪಾಟೀಲ್ ಬಗ್ಗೆ ಬಹಳ ವಿಚಾರಗಳಿವೆ. ಸದ್ಯಕ್ಕೆ ಬಾಯಿ‌ಮುಚ್ಚಿಕೊಂಡು‌ ಕುಳಿತಿರುವೆ. ತನಿಖೆ ಮುಗಿಯಲಿ ಆಗ ಹೇಳುವೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

ದಾವಣಗೆರೆಯ ಜಿಎಂಐಟಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಗುತ್ತಿಗೆದಾರ ಸಂತೋಷ್ ಆತನ ಹೆಸರಿನಲ್ಲಿ ಕೆಲಸ ಪಡೆದಿಲ್ಲ. ವರ್ಕ್ ಆರ್ಡರ್ ಕೂಡ ಇಲ್ಲ ಎಂದು ತಿಳಿಸಿದರು. ಬೇರೆಯವರ ಹೆಸರಿನಲ್ಲಿ ಕಾಮಗಾರಿ ಪಡೆದಿರುವುದು ಸೇರಿದಂತೆ ಹತ್ತು ಹಲವಾರು ವಿಚಾರಗಳಿವೆ. ಸದ್ಯ ತನಿಖೆ ಮುಗಿಯಲಿ. ಆ ಬಳಿಕ ಈ ವಿಚಾರದ ಬಗ್ಗೆ ನಾನು ಮಾತನಾಡುತ್ತೇನೆ ಎಂದು ಗೋವಿಂದ ಕಾರಜೋಳ ತಿಳಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button