Breaking NewsLatestಮೆಟ್ರೋರಾಜಕೀಯರಾಷ್ಟ್ರೀಯವಿದೇಶಸುದ್ದಿ

ಉಕ್ರೇನ್ ವಿರುದ್ಧ ಮುಂದುವರಿದ ರಷ್ಯಾ ಯುದ್ಧ, ಸ್ಫೋಟಗಳ ಸದ್ದು, 7 ನಾಗರಿಕರ ಸಾವಿನ ಶಂಕೆ

ಉಕ್ರೇನ್ ನ ಪೂರ್ವ ಪ್ರದೇಶದಲ್ಲಿ ರಷ್ಯಾ ವಿಶೇಷ ಸೇನಾ ಕಾರ್ಯಚರಣೆ ಮುಂದುವರಿಸಿದೆ. ರಷ್ಯಾದ ಪಡೆಗಳು ಕ್ರಿಮಿಯಾದಿಂದ ಉಕ್ರೇನಿಯನ್ ಪ್ರದೇಶವನ್ನು ಪ್ರವೇಶಿಸಿದವು. ಗುರುವಾರ ಬೆಳಗ್ಗೆ ಉಕ್ರೇನ್ ನ ಹಲವಾರು ನಗರಗಳಲ್ಲಿ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯನ್ನು ಆರಂಭಿಸಲಾಯಿತು. ಉಕ್ರೇನ್ ನ ಕೈವ್, ಖಾರ್ಕಿವ್ ಮತ್ತು ಇತರ ಪ್ರದೇಶಗಳಲ್ಲಿ ದೊಡ್ಡ ಸ್ಫೋಟಗಳು ಕೇಳಿಬಂದವು. ಉಕ್ರೇನ್ ನ ಹಲವಾರು ನಗರಗಳಲ್ಲಿ ಈಗ ಸ್ಫೋಟಗಳ ವರದಿಗಳು ಬರುತ್ತಿವೆ ಮತ್ತು ರಾಜಧಾನಿ ಕೈವ್ ನ ಮುಖ್ಯ ಬೋರಿಸ್ಟಿಲ್ ವಿಮಾನ ನಿಲ್ದಾಣದ ಬಳಿ ಗುಂಡಿನ ದಾಳಿಗಳು ನಡೆಯುತ್ತಿವೆ. ಆಕ್ರಮಣದಲ್ಲಿ ಈವರೆಗೆ 7 ಮಂದಿ ನಾಕರಿಕರು ಸಾವನಪ್ಪಿದ್ದಾರೆ ಎಂದು ವರದಿಯಾಗಿದೆ.

ಉಕ್ರೇನ್ ಗೆಲ್ಲುತ್ತದೆ: ಉಕ್ರೇನ್ ವಿದೇಶಾಂಗ ಸಚಿವ

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಆಕ್ರಮಣವನ್ನು ಪ್ರಾರಂಭಿಸಿದ್ದಾರೆ ಎಂದು ಉಕ್ರೀನ್ ಹೆಳಿದೆ. ಶಾಂತಿಯುತ ಉಕ್ರೇನಿಯನ್ ನಗರಗಳು ಮುಷ್ಕರದಲ್ಲಿವೆ  ಮತ್ತು ಇದು ಆಕ್ರಮಣಕಾರಿ ಯುದ್ಧ ಎಂದು ಉಕ್ರೇನಿಯನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಹೇಳಿದರು.

ಉಕ್ರೇನ್ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ ಮತ್ತು ಗೆಲ್ಲುತ್ತದೆ ಎಂದೂ ಕುಲೇಬಾ ಹೇಳಿದ್ದಾರೆ. ಉಕ್ರೇನ್ ಗಡಿಯಲ್ಲಿ ರಷ್ಯಾ ಸುಮಾರು 2 ಲಕ್ಷ ಸೈನಿಕರನ್ನು ಮತ್ತು ಸಾವಿರಾರು ಯುದ್ಧ ವಾಹನಗಳನ್ನು ಜಮಾಯಿಸಿವೆ ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕ್ ಹೇಳಿದ್ದಾರೆ.

ನಿರ್ಣಾಯಕ ಪ್ರತಿಕ್ರಿಯೆ: ಜೋ ಬಿಡೆನ್

ಉಕ್ರೇನ್ ಮೇಲೆ ರಷ್ಯಾದ ಸೇನಾ ಪಡೆಗಳ ಅಪ್ರಚೋದಿತ ಮತ್ತು ನ್ಯಾಯ ಸಮ್ಮತವಲ್ಲದ ದಾಳಿಗೆ ವಾಷಿಂಗ್ಟನ್ ಮತ್ತು ಅದರ ಮಿತ್ರ ರಾಷ್ಟ್ರಗಳು ಒಗ್ಗಟ್ಟಿನಿಂದ ಮತ್ತು ನಿರ್ಣಾಯಕ ರೀತಿಯಲ್ಲಿ ಪ್ರತಿಕ್ರಿಯಿಸುತ್ತವೆ ಎಂದು ಯುಎಸ್ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ.

ವಿನಾಶಕಾರಿ ಜೀವಹಾನಿ ಮತ್ತು ಮಾನವ ಸಂಕಟವನ್ನು ತರುವ ಪೂರ್ವಯೋಜಿತ ಯುದ್ಧವನ್ನು ಅವರು ಆಯ್ಕೆ ಮಾಡಿಕೊಂಡಿರುವುದರಿಂದ ಜಗತ್ತು ರಷ್ಯಾ ಮತ್ತು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಹೊಣೆಗಾರರನ್ನಾಗಿ ಮಾಡುತ್ತದೆ ಎಂದು ಬಿಡೆನ್ ಪ್ರತಿಜ್ಞೆ ಮಾಡಿದ್ದಾರೆ.

ಉಕ್ರೇನ್ ಬಂಡುಕೋರರಿಂದ ರಷ್ಯಾ ಬೆಂಬಲ ಮನವಿ

ಪೂರ್ವ ಉಕ್ರೇನ್ ನಲ್ಲಿರುವ ಸ್ವಯಂಘೋಷಿತ ಪೀಪಲ್ಸ್ ರಿಪಬ್ಲಿಕ್ ಗಳಾದ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಅನ್ನು ಗುರುತಿಸಿದ ಕೆಲವೇ ದಿನಗಳಲ್ಲಿ ರಷ್ಯಾ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಈ ಪ್ರದೇಶಗಳು ಮಾಸ್ಕೋ ಬೆಂಬಲವನ್ನು ಕೇಳಿದ್ದವು. ಈ ಪ್ರದೇಶಗಳು ಉಕ್ರೇನ್ ಬಂಡುಕೋರರ ನಿಯಂತ್ರಣದಲ್ಲಿವೆ.

ಉಕ್ರೇನ್ ನ್ಯಾಟೋ ನಂಟು: ಹಳಸಿದ ರಷ್ಯಾ ಸಂಬಂಧ

ನ್ಯಾಟೋ ಮತ್ತು ಯುರೋಪಿಯನ್ ಸಂಸ್ಥೆಗಳ ಕಡೆ ವಾಲಿರುವ ಉಕ್ರೇನ್ ನ ನಡೆಯನ್ನು ರಷ್ಯಾ ದೀರ್ಘಕಾಲದಿಂದ ವಿರೋಧಿಸಿದೆ. ಈಗ ಪುಟಿನ್ ಅವರು ಉಕ್ರೇನ್ ಪಶ್ಚಿಮದ ಕೈಗೊಂಬೆ ಎಂದು ದೂರಿದ್ದಾರೆ. ಹಿಂದಿನ ಸೋವಿಯತ್ ಗಣರಾಜ್ಯವಾಗಿ, ಉಕ್ರೇನ್ ರಷ್ಯಾದೊಂದಿಗೆ ಆಳವಾದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಹೊಂದಿದೆ ಮತ್ತು ಅಲ್ಲಿ ರಷ್ಯನ್ ಭಾಷೆಯನ್ನು ವ್ಯಾಪಕವಾಗಿ ಮಾತನಾಡುತ್ತಾರೆ. ಆದರೆ, 2014ರಲ್ಲಿ ರಷ್ಯಾ ಆಕ್ರಮಣ ಮಾಡಿದಂದಿನಿಂದ ಆ ಸಂಬಂಧಗಳು ಹಳಸಿವೆ.

Spread the love

Related Articles

Leave a Reply

Your email address will not be published. Required fields are marked *

Back to top button