Breaking Newsಜಿಲ್ಲಾ ಸುದ್ದಿಪ್ರವಾಸಮೈಸೂರುವಿಶೇಷ
ಧುಮ್ಮುಕ್ಕಿ ಹರಿಯುತ್ತಿರುವ ಜಲ..ಜಲ..ಧಾರೆ……

ಮೈಸೂರು : ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ಚುಂಚನಕಟ್ಟೆ ಸಮೀಪ ಇರುವ ಧನುಷ್ಕೋಟಿ ಹೆಬ್ಬಂಡೆಗಳ ಮೇಲೆ ಕಾವೇರಿ ಧುಮ್ಮಕ್ಕಿ ಹರಿಯುತ್ತಿರುವ ರಮಣೀಯ ದೃಶ್ಯ ನೋಡುಗರ ಕಣ್ಮನ ಸೆಳೆಯುತ್ತಿದೆ.
ಹೆಬ್ಬಂಡೆಗಳ ನಡುವೆ ಜಲಪಾತವೇ ಸೃಷ್ಟಿಯಾಗಿದೆ. ಇದಕ್ಕೆ ಕೊಡಗಿನಲ್ಲಿ ಮಳೆರಾಯ ಅಬ್ಬರಿಸುತ್ತಿರುವುದು. ಮಳೆರಾಯ ಆರ್ಭಟಿಸಿದಾಗಲೆಲ್ಲಾ ಕಾವೇರಿ ನದಿಯ ಭೋರ್ಗರತ ಹೆಚ್ಚಾಗುತ್ತದೆ. ರಭಸದಿಂದ ನುಗ್ಗುವ ನೀರು ಹಾಲ್ನೋರೆಯಂತೆ ಧುಮ್ಮಿಕ್ಕಿ ಹರಿಯುವ ದೃಶ್ಯ ನಿಜಕ್ಕೆ ಆನಂದಮಯವೇ ಸರಿ.
ಹತ್ತಾರು ಅಡಿಗಳಿಂದ ನರ್ತನ ಮಾಡಿಕೊಂಡು ಹರಿಯುವ ಈ ಜಲಪಾತವನ್ನು ನೋಡಲು ಜನರು ಹೆಚ್ಚಾಗಿ ಆಗಮಿಸುತ್ತಿದ್ದಾರೆ.
