Breaking NewsLatestಸುದ್ದಿ

ಧ್ವನಿವರ್ಧಕ ವಿಷಯ ಸಾಮಾಜಿಕ ವಿಷಯವೇ ಹೊರತು ಧಾರ್ಮಿಕ ವಿಷಯವಲ್ಲ: ರಾಜ್ ಠಾಕ್ರೆ

ಮುಂಬೈ: ಅಕ್ಷಯ ತೃತೀಯದ ದಿನದಂದೇ ಈದ್ ಬಂದಿರುವುದರಿಂದ ಮಹಾ ಆರತಿ ಆಚರಿಸಬೇಡಿ ಎಂದು ಕಾರ್ಯಕರ್ತರಿಗೆ ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಕರೆ ನೀಡಿದ್ದಾರೆ.

ಮುಸ್ಲಿಮ್ ಸಮುದಾಯದವರು ಯಾವುದೇ ಹಿಂಜರಿಕೆ ಇಲ್ಲದೇ ಈದ್ ನ್ನು ಆಚರಿಸಬೇಕು ಆದ್ದರಿಂದ ಅಕ್ಷಯ ತೃತೀಯದ ದಿನದಂದು ಮಹಾ ಆರತಿಯನ್ನು ನಡೆಸಬೇಡಿ ಎಂದು ರಾಜ್ ಠಾಕ್ರೆ ಹೇಳಿದ್ದಾರೆ. ಮಸೀದಿಗಳಲ್ಲಿನ ಧ್ವನಿವರ್ಧಕ ವಿಷಯ ಸಾಮಾಜಿಕ ವಿಷಯವೇ ಹೊರತು ಧಾರ್ಮಿಕ ವಿಷಯವಲ್ಲ. ಮಂಗಳವಾರದಂದು ಮುಸ್ಲಿಂ ಸಮುದಾಯದವರು ಈದ್ ಆಚರಣೆ ಮಾಡುತ್ತಿದ್ದಾರೆ. ಅವರು ಯಾವುದೇ ಹಿಂಜರಿಕೆ ಇಲ್ಲದೇ ಈದ್ ಆಚರಣೆ ಮಾಡಬೇಕು ಎಂದು ಠಾಕ್ರೆ ಹೇಳಿದ್ದಾರೆ.
ಧ್ವನಿವರ್ಧಕಗಳ ವಿಷಯದಲ್ಲಿ ತಮ್ಮ ಮುಂದಿನ ನಡೆಯನ್ನು ಸಾಮಾಜಿಕ ಜಾಲತಾಣದ ಮೂಲಕ ಘೋಷಿಸುವುದಾಗಿಯೂ ಇದೇ ವೇಳೆ ರಾಜ್ ಠಾಕ್ರೆ ತಿಳಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button