ಪಪ್ಪಾಯಿಯಲ್ಲಿ ಅಡಗಿದೆ ಯೌವನದ ಗುಟ್ಟು: ಮೊಡವೆ ಕಲೆಗಳಿಗೆ ದಿವ್ಯೌಷಧ

ಪಪ್ಪಾಯಿ ಹಣ್ಣು ಆರೋಗ್ಯಕ್ಕೆ, ಕಣ್ಣಿಗೆ ಬಹಳ ಒಳ್ಳೆಯದು. ಬಹುಪಯೋಗಿ ಪಪ್ಪಾಯಿ ಹಣ್ಣು ಅನೇಕ ಚರ್ಮ ವ್ಯಾಧಿಗಳಿಗೂ ಚಿಕಿತ್ಸೆ ನೀಡುವ ಉತ್ತಮ ಔಷಧಿಯಾಗಿದೆ. ಪಪ್ಪಾಯಿ ಹಣ್ಣಿನಲ್ಲಿರುವ ಪಪೈನ್ ಎಂಬ ಕಿಣ್ವವು ಚರ್ಮವನ್ನು ಶುದ್ಧೀಕರಿಸುವ ಅದ್ಭುತ ಗುಣಗಳನ್ನು ಹೊಂದಿದೆ. ಪಪ್ಪಾಯಿ ಹಣ್ಣಿನಲ್ಲಿ ಹೆಚ್ಚಿನ ಮಟ್ಟದ ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ವಿಟಮಿನ್ ಎ, ಸಿ ಮತ್ತು ಇ ಗಳನ್ನು ಒಳಗೊಂಡಿದೆ. ಹೀಗಾಗಿ ಇದನ್ನು ತುಂಬಾ ಜನ ಉಪಯೋಗಿಸುತ್ತಾರೆ.
ಮೊಡವೆಗಳನ್ನು ದೂರ ಮಾಡುತ್ತದೆ
ಸಹಜವಾಗಿಯೇ ಮೊಡವೆಗಳು ಅಂದವನ್ನು ಕೆಡಿಸುತ್ತದೆ. ಪಪ್ಪಾಯಿಯಲ್ಲಿರುವ ಪಪೈನ್ ಮತ್ತು ಚೈಮೊಪಪೈನ್ ಕಿಣ್ವಗಳು ಉರಿಯೂತವನ್ನು ಕಡಿಮೆ ಮಾಡುತ್ತದೆ. ಇವು ರಂಧ್ರಗಳನ್ನು ಮುಚ್ಚಿ ಹಾಕಲು ಮತ್ತು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುವ ಮೂಲಕ ಮೊಡವೆಗಳಿಗೆ ಚಿಕಿತ್ಸೆ ನೀಡುತ್ತದೆ.
ಕಲೆಗಳಿಂದ ಮುಕ್ತಿಗೊಳಿಸುತ್ತದೆ
ಮೊಡವೆ ಮೂಡಿರುವ ತ್ವಚೆಯಲ್ಲಿ ಕಲೆಗಳಾಗುವುದು ಸಹಜ. ಆದರೆ ಇದು ಸೌಂದರ್ಯವನ್ನು ಕೆಡಿಸುವುದಂತು ಸತ್ಯ. ಮೊಡವೆಗೆ ಪಪ್ಪಾಯಿಯ ಚಿಕಿತ್ಸೆಯು ಒಂದು ಜನಪ್ರಿಯವಾದ ಮನೆಮದ್ದಾಗಿದೆ. ಏಕೆಂದರೆ ಪಪ್ಪಾಯಿಯಲ್ಲಿರುವ ಕಿಣ್ವಗಳು, ಬೀಟಾ ಕ್ಯಾರೋಟಿನ್ಗಳು, ವಿಟಮಿನ್ಗಳು ಮತ್ತು ಫೈಟೊಕೆಮಿಕಲ್ಗಳು ಚರ್ಮದ ಕಲೆಗಳನ್ನು ಹಗುರಗೊಳಿಸುವ ಬಲವಾದ ಗುಣಗಳನ್ನು ಹೊಂದಿವೆ.
