Breaking NewsLatestರಾಷ್ಟ್ರೀಯಸುದ್ದಿ

ರಿಷಿ ಸುನಕ್​ಗೆ ಶುಭ ಕೋರಿದ ಬೆಕ್ಕು..! ನೂತನ ಪ್ರಧಾನಿ ಭಾಷಣವನ್ನು ಕುಳಿತು ಆಲಿಸುತ್ತಿದ್ದ ಲ್ಯಾರಿ ಫೋಟೋ ವೈರಲ್​

ಲಂಡನ್​: ಭಾರತದ ಜತೆ ನಿಕಟ ಸಂಬಂಧ ಹೊಂದಿರುವ ರಿಷಿ ಸುನಕ್ ಅವರನ್ನು ಇಂಗ್ಲೆಂಡ್​ನ ಹೊಸ ಪ್ರಧಾನಿಯಾಗಿ ನೇಮಿಸಲಾಗಿದ್ದು, ಈ ಹುದ್ದೆ ಏರಿದ ಮೊದಲ ಭಾರತೀಯ ಮೂಲದ ವ್ಯಕ್ತಿಯಾಗಿ ಇತಿಹಾಸವನ್ನು ಬರೆದಿದ್ದಾರೆ.

ಒಂದೆಡೆ, ಹೊಸ ಪ್ರಧಾನಿಗೆ ಶುಭಾಶಯಗಳು ಹರಿದುಬರುತ್ತಿದ್ದಂತೆ, ಇನ್ನೊಂದೆಡೆ ಲ್ಯಾರಿ ಎಂಬ ಬೆಕ್ಕು ಈ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡುತ್ತಿದೆ.

ಪ್ರಧಾನಿಯ ಸ್ಥಾನ ಅಲಂಕರಿಸುತ್ತಿದ್ದಂತೆಯೇ ರಿಷಿ ಸುನಕ್​ ಅವರು ವೇದಿಕೆಯಲ್ಲಿ ಭಾಷಣ ಮಾಡುತ್ತಿರುವ ಸಂದರ್ಭದಲ್ಲಿ ಪಕ್ಕದಲ್ಲಿಯೇ ಕುಳಿತ ಅವರ ಬೆಕ್ಕು ಭಾಷಣ ಆಲಿಸುತ್ತಿರುವುದನ್ನು ಚಿತ್ರದಲ್ಲಿ ಕಾಣಬಹುದಾಗಿದೆ.

ಭಾಷಣದ ಸಮಯದಲ್ಲಿ ಬೆಕ್ಕು ಬೀದಿ ದೀಪದ ಬಳಿ ಕುಳಿತಿದೆ. ಲ್ಯಾರಿ ದಿ ಕ್ಯಾಟ್​ ಎಂಬ ಹೆಸರಿನ ಟ್ವಿಟರ್​ ಖಾತೆಯಲ್ಲಿ ನೂತನ ಪ್ರಧಾನಿಗೆ ಬೆಕ್ಕೇ ಶುಭಾಶಯ ಹೇಳುವಂತೆ ಬರೆಯಲಾಗಿದೆ.

ಪ್ರಧಾನಿ ಕಚೇರಿಯ ಅಧಿಕಾರಿಯೊಬ್ಬರು ಈ ಟ್ವಿಟರ್​ ಖಾತೆಯನ್ನು ನಿರ್ವಹಿಸುತ್ತಿದ್ದು, ಕೆಲವೊಂದು ಹಾಸ್ಯದ ತುಣುಕುಗಳನ್ನು ಆಗಾಗ್ಗೆ ಶೇರ್​ ಮಾಡುತ್ತಿರುತ್ತಾರೆ. ಈಗ ನನ್ನ ಹಳೆಯ ಸ್ನೇಹಿತನಿಗೆ ಉತ್ತಮ ಹುದ್ದೆ ಸಿಕ್ಕಿದೆ ಎಂದು ಬೆಕ್ಕು ಹೇಳುವಂತೆ ಶೇರ್​ ಮಾಡಲಾಗಿದ್ದು, ಇದು ನೆಟ್ಟಿಗರನ್ನು ನಕ್ಕು ನಲಿಸುತ್ತಿದೆ.

ಅಂದಹಾಗೆ, ರಿಷಿ ಸುನಕ್ ಅವರು, ರಾಣಿ ಎಲಿಜಬೆತ್ II ಕಳೆದ ತಿಂಗಳು ನಿಧನರಾದ ನಂತರ ಹೊಸ ರಾಜ ಕಿಂಗ್ ಚಾರ್ಲ್ಸ್ III ರಿಂದ ನೇಮಕಗೊಂಡ ಮೊದಲ ಪ್ರಧಾನಿಯಾಗಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button