Breaking NewsLatestಕಲಬುರ್ಗಿಜಿಲ್ಲಾ ಸುದ್ದಿರಾಜ್ಯಸುದ್ದಿ

ಹುಬ್ಬಳಿ ಘಟನೆ ಹಿಂದೂಗಳನ್ನು ಹಾಗೂ ಪೊಲೀಸರನ್ನು ಹಣಿಯುವ ಷಡ್ಯಂತ್ರ: ಆಂದೋಲ ಶ್ರೀ ಆರೋಪ

ಕಲಬುರಗಿ: ಹಳೇ ಹುಬ್ಬಳ್ಳಿಯ ಮುಸ್ಲಿಂಮರು ಉದ್ದೇಶ ಪೂರ್ವಕವಾಗಿ ದಾಳಿ ಮಾಡಿದ್ದಾರೆ ಇದರ ಹಿಂದೆ ಬಹುದೊಡ್ಡ ಷಡ್ಯಂತ್ರ ಇದೆ ಎಂದು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಆಂದೋಲ ಮಠದ ಸಿದ್ದಲಿಂಗ ಸ್ವಾಮೀಜಿಗಳು ಆರೋಪಿಸಿದ್ದಾರೆ. ಹಳೇ ಹುಬ್ಬಳ್ಳಿಯಲ್ಲಿ ನಡೆದ ಕಲ್ಲು ತೂರಾಟ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ಆಂದೋಲ ಶ್ರೀ, ಹಿಂದೂಗಳನ್ನ ಗುರಿಯಾಗಿಸಿಕೊಂಡು ಈ ದಾಳಿ ಮಾಡಿದ್ದಾರೆ.

ಮುಸ್ಲಿಂಮರು ಉದ್ದೇಶ ಪೂರ್ವಕವಾಗಿ ದಾಳಿ ಮಾಡಿದ್ದಾರೆ. ಇದರ ಹಿಂದೆ ಬಹುದೊಡ್ಡ ಷಡ್ಯಂತ್ರವಿದೆ ಎಂದು ದೂರಿದ್ದಾರೆ. ಇವರ ಗುರಿ ಹಿಂದೂಗಳು ಮತ್ತು ಪೊಲೀಸರು. ಪೊಲೀಸ್ ಇಲಾಖೆಯನ್ನ ಹಣಿಯಲು, ಪೊಲೀಸರನ್ನ ಹೆದರಿಸುವುದಕೋಸ್ಕರ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ‌. ಇವರ ವಿರುದ್ದ ಪೊಲೀಸ್ ಇಲಾಖೆ, ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಕೇವಲ ನಾಲ್ಕು ಜನ ಮುಸ್ಲಿಂರಿಂದ ಈ ಘಟನೆ ಸಂಭವಿಸಿದ್ದಲ್ಲ. ಇದರ ಹಿಂದೆ ಪಿಎಫ್ ಐ, ಎಸ್ ಡಿಪಿಐ ಇದೆಯಾ ಅನ್ನೋದನ್ನ ಪತ್ತೆ ಹಚ್ಚಿ ಬಹಿರಂಗಗೊಳಿಸಬೇಕು. ರಾಜ್ಯ ಸರ್ಕಾರಕ್ಕೆ ಕಪ್ಪು ಚುಕ್ಕೆ ತರಲು ಮುಸ್ಲಿಂಮರು ಅವಕಾಶಕ್ಕಾಗಿ ಕಾಯ್ತಾ ಕೂತಿದ್ದರು. ಇಡೀ ಸಮಾಜ, ಪೊಲೀಸ್ ಇಲಾಖೆ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಕೂಲಂಕುಶವಾಗಿ ತನಿಖೆ ನಡೆಸಬೇಕು, ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button