
ಮುಂಬಯಿ: ಆಪರೇಷನ್ ಗಂಗಾ ಅಡಿಯಲ್ಲಿ 182 ಭಾರತೀಯ ಪ್ರಯಾಣಿಕರನ್ನು ಹೊತ್ತ 7 ನೇ ವಿಮಾನ ಮಂಗಳವಾರ ಬೆಳಗ್ಗೆ ಮುಂಬಯಿಗೆ ಬಂದಿಳಿದಿದೆ. ಛತ್ರಪತಿ ಶಿವಾಜಿ ಮಹಾರಾಜ್ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಚಿವ ನಾರಾಯಣ ರಾಣೆ ಪ್ರಯಾಣಿಕರನ್ನು ಬರಮಾಡಿಕೊಂಡರು. ಆಪರೇಷನ್ ಯುದ್ಧ ಪೀಡಿತ ಉಕ್ರೆನ್ ನಿಂದ ಸ್ಥಳಾಂತರಿಸಲಾಗಿದೆ. ಕಳೆದ ರಾತ್ರಿ, ಬುಕಾರೆಸ್ಟ್ ನಿಂದ ಮುಂಬಯಿಗೆ ಈ 7ನೇ ವಿಮಾನ ಹೊರಟಿತ್ತು.
ಬುಡಾಫೆಸ್ಟ್ ನಿಂದ ದೆಹಲಿಯತ್ತ 8ನೇ ವಿಮಾನ
8ನೇ ಆಪರೇಷನ್ ಗಂಗಾ ವಿಮಾನವು ಮಂಗಳವಾರ 216 ಭಾರತೀಯ ಪ್ರಜೆಗಳೊಂದಿಗೆ ಬುಡಾಫೆಸ್ಟ್ ನಿಂದ ನವದೆಹಲಿಗೆ ಹೊರಟಿದೆ. ಪ್ರತಿಯೊಬ್ಬರ ಸುರಕ್ಷಿತ ವಾಪಸಾತಿಗಾಗಿ ನಮ್ಮ ಪ್ರಯತ್ನ ಮುಂದುವರಿದಿದೆ ಎಂದು ವಿದೇಶಾಂಗ ಸಚಿವ ಜೈ ಶಂಕರ್ ಹೇಳಿದರು.
ಉಕ್ರೇನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಫೆ.24ರಿಂದ ರಾಯಭಾರ ಕಚೇರಿ ಬಳಿ ನೆಲೆಸಿರುವ 400 ವಿದ್ಯಾರ್ಥಿಗಳು ರೈಲಿನಲ್ಲಿ ಕೈವ್ ನಿಂದ ಯಶಸ್ವಿಯಾಗಿ ಹೊರಟಿದ್ದಾರೆ ಎಂದು ತಿಳಿಸಿದೆ. ಕರ್ಫ್ಯೂ ತೆರೆವುಗೊಂಡ ನಂತರ ಕೈವ್ ನಲ್ಲಿರುವ ಉಳಿದ ಕೆಲವು ವಿದ್ಯಾರ್ಥಿಗಳಿಗೆ ಉಕ್ರೇನ್ ನಲ್ಲಿರುವ ಭಾರತೀಯ ಮಿಷನ್ ಸಲಹೆ ನೀಡಿದೆ.
