Breaking NewsLatestರಾಜಕೀಯರಾಜ್ಯರಾಷ್ಟ್ರೀಯಸುದ್ದಿ

ವಿದ್ಯಾರ್ಥಿಗಳನ್ನು ರಕ್ಷಿಸಿದ ಪ್ರಧಾನಿಗೆ ಧನ್ಯವಾದ ಹೇಳುವೆ: ತೇಜಸ್ವಿ ಸೂರ್ಯ

3 ವಾರಗಳಿಂದ ಆಪರೇಶನ್ ಗಂಗಾ ಯೋಜನೆ ಜಾರಿಯಲ್ಲಿತ್ತು. ಉಕ್ರೇನ್​ನಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ಕರೆದುಕೊಂಡು ಬರಲಾಗಿದೆ. 19,448 ಭಾರತೀಯರನ್ನು ಉಕ್ರೇನ್​ನ ವಿವಿಧ ಭಾಗಗಳಿಂದ ಮಾತೃ ಭೂಮಿಗೆ ಸುರಕ್ಷಿತವಾಗಿ ಕರೆದುಕೊಂಡು ಬರಲಾಗಿದೆ ಎಂದು ಬೆಂಗಳೂರಿನಲ್ಲಿ ಸಂಸದ ತೇಜಸ್ವಿ ಸೂರ್ಯ ಸುದ್ದಿ ಗೋಷ್ಠಿಲಿ ಹೇಳಿದ್ದಾರೆ.

ಸರಿ ಸುಮಾರು 16 ಸಾವಿರ ವಿದ್ಯಾರ್ಥಿಗಳು ಇದರಲ್ಲಿದ್ದಾರೆ. ವಿದ್ಯಾರ್ಥಿಗಳ ಪರವಾಗಿ ನಾನು ನಮ್ಮ ಪ್ರಧಾನಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. 633 ಕನ್ನಡಿಗ ವಿದ್ಯಾರ್ಥಿಗಳನ್ನು ಕರೆತರಲಾಗಿದೆ. ಆಪರೇಶನ್ ಗಂಗಾ ಸಾಕಷ್ಟು ಜಟಿಲವಾಗಿತ್ತು. ಪ್ರಧಾನಿ ಸತತ ಪ್ರಯತ್ನದಿಂದ ಆಪರೇಶನ್ ಗಂಗಾ ಯಶಸ್ವಿ ಆಗಿದೆ.

ಉಕ್ರೇನ್ ಹಾಗೂ ರಷ್ಯಾ ಅಧ್ಯಕ್ಷರ ಜತೆ ನಿರಂತರವಾಗಿ ಸಂಪರ್ಕ ಮಾಡಿ ಭಾರತೀಯರನ್ನು ಕರೆ ತರುವಲ್ಲಿ ಪ್ರಧಾನಿ ಯಶಸ್ವಿ ಆಗಿದ್ದಾರೆ. ನನ್ನ ಕಚೇರಿಯಿಂದಲೂ ಸಾಕಷ್ಟು ಕೆಲಸವನ್ನು ಮಾಡಲಾಗಿದೆ. ೪೦೦ ವಿದ್ಯಾರ್ಥಿಗಳ ಪಟ್ಟಿ ರೆಡಿ ಮಾಡಿ ಕೇಂದ್ರಕ್ಕೆ ಸಲ್ಲಿಸಲಾಗಿತ್ತು. ಉಕ್ರೇನ್​ನ ವಾಟ್ಸ್ ಅಪ್ ಗ್ರೂಪ್​ಗಳಿಗೆ ಆಡ್ ಮಾಡಿ ವಿದ್ಯಾರ್ಥಿಗಳ ಸಂಪರ್ಕ ಪಡೆಯಲಾಗಿತ್ತು. ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲ ಅವರವರ ಪ್ರಾಣಿಗಳನ್ನು ಕೂಡ ಆಪರೇಶನ್ ಗಂಗಾ ಮೂಲಕ ರಕ್ಷಿಸಲಾಗಿದೆ ಎಂದು ಹೇಳಿದರು.

Spread the love

Related Articles

Leave a Reply

Your email address will not be published. Required fields are marked *

Back to top button