Breaking NewsLatestಮೆಟ್ರೋರಾಷ್ಟ್ರೀಯಸುದ್ದಿ

ಲಸಿಕೆ ನೀಡಿಕೆಯಲ್ಲಿ ದೇಶದಲ್ಲೇ ದೊಡ್ಡ ಸಾಧನೆ ಮಾಡಿದ ತೆಲಂಗಾಣ

ಹೈದರಾಬಾದ್ : ಕೋವಿಡ್ ವಿರುದ್ಧದ ಸಮರದಲ್ಲಿ ತೆಲಂಗಾಣ ಮಹತ್ತರ ಸಾಧನೆ ಮಾಡಿದೆ. ಶೇಕಡ ನೂರರಷ್ಟು ಮೊದಲ ಡೋಸ್ ಲಸಿಕೆ ನೀಡಿದ ಸಾಧನೆ ಮಾಡಿದ ದೊಡ್ಡ ರಾಜ್ಯಗಳ ಪೈಕಿ ದೇಶದಲ್ಲೆ ಮೊಟ್ಟ ಮೊದಲ ಸ್ಥಾನ ಪಡೆದಿದೆ. ರಾಜ್ಯ ಆರೋಗ್ಯ ಸಚಿವ ಹರೀಶ್ ರಾವ್ ಈ ವಿಷಯ ತಿಳಿಸಿದ್ದಾರೆ. ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಶೇಕಡ ನೂರರಷ್ಟು ಮೊದಲ ಡೋಸ್ ನೀಡಿಕೆಯಲ್ಲಿ ಸಾಧನೆ ಮಾಡಿದ ಏಕೈಕ ದೊಡ್ಡ ರಾಜ್ಯ ಎಂಬ ಹೆಗ್ಗಳಿಕೆಗೆ ತೆಲಂಗಾಣ ಪಾತ್ರವಾಗಿರುವುದು ಸಂತೋಷದ ವಿಷಯ. ಇದಕ್ಕಾಗಿ ಹಗಲಿರುಳು ಶ್ರಮಿಸಿದ ವೈದ್ಯರು, ಆರೋಗ್ಯ ಕಾರ್ಯಕರ್ತರು ಮತ್ತು ಸಹಕರಿಸಿದ ರಾಜ್ಯದ ಜನತೆಗೆ ಧನ್ಯವಾದ ಹೇಳಿದ್ದಾರೆ.
ಇದಕ್ಕೂ ಮೊದಲು ಪುಟ್ಟ ಪುಟ್ಟ ರಾಜ್ಯಗಳು ಶೇಕಡ ನೂರರಷ್ಟು ಲಸಿಕೆ ನೀಡಿಕೆಯಲ್ಲಿ ಯಶಸ್ವಿಯಾಗಿದ್ದವು ಆದರೆ ದೇಶದ ಯಾವುದೇ ದೊಡ್ಡ ರಾಜ್ಯ ಈವರೆಗೆ ಈ ಸಾಧನೆ ಮಾಡಿರಲಿಲ್ಲ
ಇನ್ನು ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ನಿಕೋಬಾರ್ ಚಂಡಿಗಢ, ದಾದ್ರಾ, ನಗರ್ ಹವೇಲಿ ಹಾಗೂ ಹಿಮಾಚಲ ಪ್ರದೇಶ ಮತ್ತು ಜಮ್ಮು ಕಾಶ್ಮೀರದಂತಹ ಪುಟ್ಟರಾಜ್ಯಗಳು ಶೇಕಡ ನೂರರಷ್ಟು ಮೊದಲ ಡೋಸ್ ಲಸಿಕೆ ನೀಡಿ ಸಾಧನೆ ಮಾಡಿದ್ದವು . ಈಗ ದೊಡ್ಡ ರಾಜ್ಯದ ಸಾಧನೆ – ಕೀರ್ತಿ ಮೊದಲ ಬಾರಿ ತೆಲಾಂಗಾಣ ರಾಜ್ಯಕ್ಕೆ ಭಾಜನವಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button