Breaking NewsLatestರಾಜಕೀಯರಾಷ್ಟ್ರೀಯ
ಮತ್ತೆ ಫೇಸ್‌ಬುಕ್ ಖಾತೆ ನಿಷೇಧ; ತಸ್ಲಿಮಾ ನಸ್ರೀನ್ ಆರೋಪ

ನವದೆಹಲಿ: ಸತ್ಯ ಹೇಳಿದ್ದಕ್ಕಾಗಿ ಮತ್ತೊಮ್ಮೆ ತಮ್ಮ ಫೇಸ್‌ಬುಕ್ ಖಾತೆಯನ್ನು ಒಂದು ವಾರ ಕಾಲ ಬಳಸದಂತೆ ನಿಷೇಧಿಸಲಾಗಿದೆ ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರೀನ್ ಹೇಳಿದ್ದಾರೆ.
ಹನುಮಂತನ ತೊಡೆಯ ಮೇಲೆ ಹಿಂದೂಗಳು ಕುರಾನ್ ಇಟ್ಟಿದ್ದಾರೆಂದು ನಂಬಿ ಬಾಂಗ್ಲಾದೇಶದ ಹಿಂದೂ ಮನೆಗಳು ಮತ್ತು ದೇವಾಲಯಗಳನ್ನು ಇಸ್ಲಾಮಿಗಳು ನಾಶಪಡಿಸಿದರೆಂದು ಬರೆದಿದ್ದಕ್ಕಾಗಿ ಫೇಸ್‌ಬುಕ್ ನನ್ನನ್ನು ನಿಷೇಧಿಸಿದೆ. ಆದರೆ ಅದನ್ನು ಮಾಡಿದ್ದು ಹಿಂದೂಗಳಲ್ಲಿ, ಬದಲಿಗೆ ಇಕ್ಬಾಲ್ ಹುಸೇನ್ ಎಂಬಾತ ಎಂದು ತಿಳಿದುಬಂದಾಗ ಇಸ್ಲಾಮಿಗಳು ಮೌನವಾಗಿದ್ದರು. ಇಕ್ಬಾಲ್ ವಿರುದ್ಧ ಏನನ್ನೂ ಹೇಳಲಿಲ್ಲ ಎಂದು ತಸ್ಲಿಮಾ ಟ್ವಿಟರ್ನಲ್ಲಿ ಬರೆದಿದ್ದಾರೆ.
ಕಳೆದ ಮಾರ್ಚ್ 16ರಂದು ಕೂಡ ಒಂದು ದಿನದ ಮಟ್ಟಿಗೆ ಅವರ ಫೇಸ್‌ಬುಕ್ ಖಾತೆ ಸ್ಥಗಿತಗೊಂಡಿದ್ದರ ಬಗ್ಗೆ ಅವರು ಹೇಳಿದ್ದರು.
